ಮುಂದಿನ ತಿಂಗಳು ಬಾಹ್ಯಾಕಾಶಕ್ಕೆ ಉಪಗ್ರಹ ಹಾರಿಸುವ ತನ್ನ ಯೋಜನೆಗೆ ಅಡ್ಡಿಪಡಿಸದಂತೆ ಅಮೆರಿಕ, ಜಪಾನ್ ಮತ್ತಿತರ ಮಿತ್ರರಾಷ್ಟ್ರಗಳಿಗೆ ಉತ್ತರ ಕೊರಿಯ ಎಚ್ಚರಿಕೆ ನೀಡಿದೆ. ಏಪ್ರಿಲ್ 4 ಮತ್ತು 8ರ ನಡುವೆ ಸಂಪರ್ಕ ಉಪಗ್ರಹವನ್ನು ಕಳಿಸುವ ತನ್ನ ಇಚ್ಛೆಯನ್ನು ಉತ್ತರಕೊರಿಯ ಘೋಷಿಸಿದೆ.
ದೂರಗಾಮಿ ಕ್ಷಿಪಣಿ ತಂತ್ರಜ್ಞಾನದ ಪರೀಕ್ಷೆಗೆ ಉತ್ತರಕೊರಿಯ ತನ್ನ ಉಡಾವಣೆಯನ್ನು ಬಳಸಿಕೊಳ್ಳಬಹುದೆಂದು ಶಂಕೆ ಆವರಿಸಿದ್ದು, ಉಡಾವಣೆಯಿಂದ ಅಂತಾರಾಷ್ಟ್ರೀಯ ದಿಗ್ಬಂಧನಗಳಿಗೆ ಎಡೆಮಾಡುತ್ತದೆಂದು ವ್ಯೋಂಗ್‌ಯಾಂಗ್‌ಗೆ ಎಚ್ಚರಿಸಿದೆ.
ಉತ್ತರ ಕೊರಿಯ ಖಂಡಾಂತರ ಕ್ಷಿಪಣಿ ಚಟುವಟಿಕೆಗಳಲ್ಲಿ ನಿರತವಾಗುವುದಕ್ಕೆ 2006ರ ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯ ನಿಷೇಧ ವಿಧಿಸಿದ್ದು, ದೂರಗಾಮಿ ಕ್ಷಿಪಣಿ ಉಡಾವಣೆ ಅಥವಾ ಬಾಹ್ಯಾಕಾಶಕ್ಕೆ ಉಪಗ್ರಹ ಕಳಿಸಲು ರಾಕೆಟ್ ಉಡಾವಣೆ ಸಹ ಸೇರಿದೆಯೆಂದು ವಾಷಿಂಗ್ಟನ್ ತಿಳಿಸಿದೆ. ಆದರೆ ಉತ್ತರಕೊರಿಯ ಬಾಹ್ಯಾಕಾಶ ಕಾರ್ಯಕ್ರಮವನ್ನು ಶಾಂತಿಯುತ ಉದ್ದೇಶಕ್ಕೆ ಬಳಸುವ ತನ್ನ ಹಕ್ಕನ್ನು ಪ್ರತಿಪಾದಿಸಿದೆ.
ತನ್ನ ವಿರುದ್ಧ ಯಾವುದೇ ದಿಗ್ಬಂಧನವು ನೆರವಿಗಾಗಿ ನಿಶ್ಶಸ್ತ್ರೀಕರಣ ಒಪ್ಪಂದದ ಆಶಯವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಉತ್ತರ ಕೊರಿಯಾ ಎಚ್ಚರಿಸಿದೆ. ಇಂಧನ ನೆರವು ಮುಂತಾದ ಅನುಕೂಲಗಳಿಗೆ ಪ್ರತಿಯಾಗಿ ಉತ್ತರಕೊರಿಯವು ಪರಮಾಣು ಕಾರ್ಯಕ್ರಮವನ್ನು ತ್ಯಜಿಸುವುದಾಗಿ ತಿಳಿಸಿತ್ತು. |