ಭಾರತ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಜತೆ ಬ್ರಿಟಿನ್ ಪ್ರಧಾನಿ ಗೋರ್ಡನ್ ಬ್ರೌನ್ ಮಾತುಕತೆ ನಡೆಸಿದ್ದು, ಮುಂಬಯಿ ದಾಳಿಕೋರರನ್ನು ಪತ್ತೆಹಚ್ಚಲು ನೆರವಾಗಲು ಸಿದ್ಧರಿರುವುದಾಗಿ ಹೇಳಿದ್ದಾರೆ. ಏಪ್ರಿಲ್ 2 ಮತ್ತು 3ರಂದು ಲಂಡನ್‌ನ ಡಾಕ್ ಲ್ಯಾಂಡ್ಸ್‌ನಲ್ಲಿ ನಡೆಯಲಿರುವ ಜಿ-20 ಶೃಂಗ ಸಭೆಯನ್ನು ದೃಷ್ಟಿಯಲ್ಲಿರಿಸಿ ಮಾತುಕತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. |