ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ಮೇಲೆ ತಾಲಿಬಾನ್ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಮೇಲೆ ತಾಲಿಬಾನ್ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆ
ಇಸ್ಲಾಮಾಬಾದ್ ಸ್ಫೋಟದ ಬೆನ್ನಲ್ಲೇ ಪಾಕ್‌ನ ಪ್ರಮುಖ ನಗರಗಳ ಮೇಲೆ ದಾಳಿ ನಡೆಸಲು ತಾಲಿಬಾನ್ ಸಂಚು ರೂಪಿಸಿರುವ ವಿಷಯ ಬಹಿರಂಗವಾಗಿದೆ.

ತಾಲಿಬಾನ್ ಮುಖಂಡ ಬೈತುಲ್ಲಾ ಮೆಹಸೂದ್ 20ಮಂದಿ ವಿದೇಶಿ ಉಗ್ರರನ್ನು ವಿಧ್ವಂಸಕ ಕೃತ್ಯ ಎಸಗಲು ಈಗಾಗಲೇ ಇಸ್ಲಾಮಾಬಾದ್, ರಾವಲ್ಪಿಂಡಿ, ಲಾಹೋರ್ ಹಾಗೂ ಇತರೆ ನಗರಗಳಲ್ಲಿ ನಿಯೋಜಿಸಿರುವುದಾಗಿ ಪಾಕ್ ಗುಪ್ತಚರ ದಳ ಎಚ್ಚರಿಕೆ ನೀಡಿರುವುದಾಗಿ ಡಾನ್ ಪತ್ರಿಕೆಯ ವರದಿ ತಿಳಿಸಿದೆ.

ಬೆದರಿಕೆಯ ಹಿನ್ನೆಲೆಯಲ್ಲಿ ಆಯಾಕಟ್ಟಿನ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್‌ಗಳಲ್ಲಿ ವಾಹನ ಮತ್ತು ಜನರನ್ನು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ ಎಂದು ವರದಿ ಹೇಳಿದೆ.

ಅಲ್ಲದೇ ಪ್ರತಿಷ್ಠಿತ ಹೋಟೆಲುಗಳಲ್ಲಿ ತೀವ್ರ ತಪಾಸಣೆ ಕಾರ್ಯ ನಡೆಸಲಾಗುತ್ತಿದೆ. ಶಂಕಿತ 36ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ, 20ಮಂದಿಯನ್ನು ಬಂಧಿಸಲಾಗಿದ್ದು, ಅವರಿದಂದ ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಾಂಗ್ಲಾ: ಇಸ್ಲಾಮಿಕ್ ಶಾಲೆಯಲ್ಲಿ ಶಸ್ತ್ರಾಸ್ತ್ರ ವಶ!
ಬಾಂಗ್ಲಾ: ಮಾರಕಾಯುಧಗಳ ಪತ್ತೆ
ಮನಮೋಹನ್ ಜತೆ ಬ್ರೌನ್ ಮಾತುಕತೆ
ಉಪಗ್ರಹ ಉಡಾವಣೆ ಅಡ್ಡಿಪಡಿಸದಂತೆ ಉ. ಕೊರಿಯ ಎಚ್ಚರಿಕೆ
ಬಾಬಿ ಜಿಂದಾಲ್ ಅಧ್ಯಕ್ಷಗಿರಿ ಸ್ಪರ್ಧಿಯಲ್ಲ: ಸುಪ್ರಿಯ
ಪ್ರಸರಣ ನಿಷೇಧ ವ್ಯವಸ್ಥೆ ಗಟ್ಟಿಗೊಳಿಸಲು ಅಮೆರಿಕ ಕರೆ