ಪಂಜಾಬ್ ಪ್ರಾಂತ್ಯದಲ್ಲಿ ಸರ್ಕಾರ ರಚನೆಗಾಗಿ ಮತ್ತೆ ಪಾಕ್ ಸರ್ಕಾರದೊಂದಿಗೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್) ವರಿಷ್ಠ ನವಾಜ್ ಷರೀಫ್ ಬುಧವಾರ ಸ್ಪಷ್ಟಪಡಿಸಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಿಎಂಎಲ್-ಎನ್ ಪಾಕ್ ಸರ್ಕಾರದೊಂದಿಗೆ ಕೈಜೋಡಿಸಲಿದೆ ಎಂಬುದನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಷರೀಫ್, ಯಾವುದೇ ಕ್ಯಾಬಿನೆಟ್ ದರ್ಜೆಯ ಬೇಡಿಕೆ ಇಲ್ಲದೆ ಫೆಡರಲ್ ಸರ್ಕಾರ ರಚನೆಗೆ ಪಕ್ಷ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಲಿದೆ ಎಂದರು.
ಶೀಘ್ರದಲ್ಲೇ ಚಾರ್ಟರ್ ಆಫ್ ಡೆಮೋಕ್ರಸಿ(ಸಿಒಡಿ)ಸ್ಥಾಪನೆಯಾಗುವ ಭರವಸೆ ವ್ಯಕ್ತಪಡಿಸಿದ ಅವರು, ತಮ್ಮ ಬೇಡಿಕೆ ಈಡೇರಿಕೆಗಾಗಿ ಜರ್ದಾರಿ ಅವರು ಮಾತುಕತೆ ನಡೆಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಚಾರ್ಟರ್ ಡೆಮೋಕ್ರಸಿ ಸ್ಥಾಪನೆ ಕುರಿತಂತೆ ಎರಡೂ ಪಕ್ಷಗಳು ಕೈಜೋಡಿಸುವ ಕುರಿತಾಗಿ ತಾನು ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ಷರೀಫ್ ಹೇಳಿರುವುದಾಗಿ ವರದಿಯೊಂದು ತಿಳಿಸಿದೆ. |