ಪಂಜಾಬ್‌ನಲ್ಲಿ ಸರ್ಕಾರ ರೂಪಿಸಲು ಪಾಕಿಸ್ತಾನ್ ಪೀಪಲ್ಸ್ ಪಕ್ಷದೊಂದಿದೆ ಪಾಕಿಸ್ತಾನ್ ಮುಸ್ಲಿಂಲೀಗ್-ನವಾಜ್(ಪಿಎಂಎಲ್-ಎನ್) ಕೈಜೋಡಿಸಲಿದೆ ಎಂಬ ಊಹಾಪೋಹಗಳನ್ನು ನವಾಜ್ ಶರೀಪ್ ತಳ್ಳಿಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪಿಎಂಎನ್-ಎನ್ ಮುಖ್ಯಸ್ಥ ನವಾಜ್ ಶರೀಫ್ ಅವರು ತಮ್ಮ ಪಕ್ಷವು ಕ್ಯಾಬಿನೆಟ್‌ನಲ್ಲಿ ಸ್ಥಾನ ಯಾಚಿಸದೆ ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ.ಪ್ರಜಾಪ್ರಭುತ್ವದ ಸನ್ನದು(ಸಿಓಡಿ) ಸದ್ಯವೇ ಜಾರಿಯಾಗಬಹುದು ಎಂಬ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಾನು ನೀಡಿದ ಭರವಸೆಗಳನ್ನು ಪೂರೈಸುವಂತೆ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯವರಿಗೆ ಕರೆ ನೀಡಿದರು." ಪ್ರಜಾಪ್ರಭುತ್ವದ ಸನ್ನದನ್ನು ಜಾರಿಗೆಗೆ ತರಲು ಉಭಯ ಪಕ್ಷಗಳು ಕೈಜೋಡಿಸಬಹುದು" ಎಂಬುದಾಗಿ ತಾನು ಪ್ರಧಾನಿ ಗಿಲಾನಿ ಅವರಿಗೆ ತಿಳಿಸಿರುವುದಾಗಿ ನವಾಜ್ ಷರೀಫ್ ಹೇಳಿದ್ದಾರೆ.ರಾಷ್ಟ್ರೀಯ ಹೊಂದಾಣಿಕೆ ಆಧ್ಯಾದೇಶ(ಎನ್ಆರ್ಓ) ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ಈ ತಿಂಗಳ ಆದಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಈ ಕುರಿತು ಜರ್ದಾರಿ ಸರ್ಕಾರದ ವಿರುದ್ದ ತೀವ್ರ ದಾಳಿ ನಡೆಸಿದ್ದರು. |