ನೇಪಾಳದಿಂದ ಸಾವಯವ ಹಣ್ಣುಗಳು ಮತ್ತು ತರಕಾರಿಗಳನ್ನು ಆಮದು ಮಾಡಿಕೊಳ್ಳವ ಬಯಕೆಯನ್ನು ವ್ಯಕ್ತಪಡಿಸಿರುವ ಚೀನ, ಪರ್ವತ ತಪ್ಪಲ ರಾಷ್ಟ್ರದ ಆಭಿವೃದ್ಧಿಗೆ ಸಹಾಯ ನೀಡುವುದಾಗಿ ಹೇಳಿದೆ.
ನೇಪಾಳದ ಅಭಿವೃದ್ಧಿಗಾಗಿ ಚೀನವು ಸಹಾಯ ಮಾಡುವುದನ್ನು ಮುಂದುವರಿಸಲಿದೆ ಎಂಬುದಾಗಿ ಕಾಠ್ಮಂಡುವಿನಲ್ಲಿ ಚೀನ ರಾಯಭಾರಿ ಕ್ವಿಯು ಗುಹ್ವಾಂಗ್ ಹೇಳಿದ್ದಾರೆ. ಕಾಠ್ಮಂಡು ಕಣಿವೆಯ 30 ಕಿಲೋಮೀಟರ್ ಪಶ್ಚಿಮಕ್ಕಿರುವ ಮಹೇಂದ್ರ ಜ್ಯೋತಿ ಗ್ರಾಮವನ್ನು ಸಾವಯವ ಗ್ರಾಮವನ್ನಾಗಿ ಘೋಷಿಸಲು ಸ್ಥಳೀಯ ಕೃಷಿ ಜಾಲ ಒಂದು ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಇದೇ ವೇಳೆ ಅವರು ಸ್ಥಳೀಯ ಗಣೇಶ್‌ಭಾರತಿ ಪ್ರೌಢಶಾಲೆಯ ಅಭಿವೃದ್ಧಿಗಾಗಿ ಒಂದು ಲಕ್ಷ ರೂಪಾಯಿ ಸಹಾಯ ಘೋಷಿಸಿದರು. |