ಜಾಗತಿಕ ತಾಪಮಾನದಿಂದಾಗಿ ಅಲ್ಪೈನ್ ಗ್ಲೇಶಿಯರ್ ಕರಗಿರುವ ಹಿನ್ನೆಲೆಯಲ್ಲಿ ಯುರೋಪಿನ ನೆರೆದೇಶಗಳಾದ ಇಟಲಿ ಮತ್ತು ಸ್ವಿಜರ್ಲ್ಯಾಂಡ್‌ಗಳು ತಮ್ಮ ಗಡಿಯನ್ನು ಮರುಗುರುತಿಸಲು ನಿರ್ಧರಿಸಿರುವುದಾಗಿ ಬ್ರಿಟನ್ನಿನ ಪ್ರಮುಖ ದೈನಿಕ ಒಂದು ಹೇಳಿದೆ.
ಈ ರಾಷ್ಟ್ರಗಳ ಅಂತಾರಾಷ್ಟ್ರೀಯ ಗಡಿಯನ್ನು 1861ರಲ್ಲಿ ನಿಗದಿಸಲಾಗಿದೆ. ಆದರೆ ಕಳೆದ ಶತಮಾನದಿಂದ ಹಿಮಪರ್ವತಗಳು ಮುಳುಗಲಾಗರಂಭಿಸಿದ್ದು, ಕಳೆದ ಐದು ವರ್ಷಗಳಿಂದ ನಾಟಕೀಯವೆಂಬಂತೆ ಅಗಾಧ ಪ್ರಮಾಣದಲ್ಲಿ ಇದು ಕರಗಲಾರಂಭಿಸಿದೆ.
ಈ ಪ್ರದೇಶದಲ್ಲಿ ರಾಷ್ಟ್ರದ ಗಡಿರೇಖೆಗಳು ಹಾದುಹೋಗುತ್ತಿರುವ ಕಾರಣ ಉಭಯ ರಾಷ್ಟ್ರಗಳ ತಜ್ಞರು ನೂತನ ಗಡಿಯನ್ನು ಚಿತ್ರಿಸಲು ಮುಂದಾಗಿದ್ದಾರೆ. |