ಇತ್ತೀಚೆಗಷ್ಟೆ 50ನೆ ಹುಟ್ಟುಹಬ್ಬವನ್ನು ಆಚರಿಸಿರುವ ವಿಶ್ವವಿಖ್ಯಾತ ಬಾರ್ಬಿ ಗೊಂಬೆಯ ತಯಾಕರ ಸಂಸ್ಥೆ ಮಾಟೆಲ್ ಕಂಪೆನಿಯು ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಗೊಂಬೆಗಳನ್ನು ತಯಾರಿಸಲು ಹೊರಟಿದ್ದು, ಜಗಜದೇಕ ಸುಂದರಿ, ಐಶ್ವರ್ಯಾ ರೈ ಮಾದರಿಯ ಬೊಂಬೆಗಳನ್ನು ತಯಾರಿಸಲು ಮುಂದಾಗಿದೆ.ಈ ಕುರಿತು ಐಶ್ವರ್ಯ ಪ್ರತಿನಿಧಿಗಳು ಹಾಗೂ ಮಾಟೆಲ್ ಕಂಪೆನಿ ಜತೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.ಬಾರ್ಬಿ ತಯಾರಿಕೆಯಲ್ಲಿ 50 ವರ್ಷಗಳನ್ನು ದಾಟಿರುವ ಕಂಪೆನಿಯು ಐಶ್ವರ್ಯಾ ಜನಪ್ರಿಯತೆಯನ್ನು ಬಳಸಿಕೊಂಡು ಇದರಿಂದ ಲಾಭ ಮಾಡುವ ಕನಸು ಕಾಣುತ್ತಿದೆ. ಐಶ್ ರೂಪದ ಗೊಂಬೆಯು ಹಸಿರು ಕಣ್ಣುಗಳನ್ನು ಹೊಂದಿದ್ದು, ಭಾರತದ ಪ್ರಮುಖ ವಿನ್ಯಾಸಕರು ರೂಪಿಸಿರುವ ಉಡುಪನ್ನು ತೊಡಲಿದೆ.ಬಾರ್ಬಿ ಬೊಂಬೆಗೆ ಈ ಹಿಂದೆ ರೂಪದರ್ಶಿಯರಾಗಿದ್ದ ಹಾಲಿವುಡ್ ತಾರೆಗಳಾದ ಬೆಯಾನ್ಸ್ ನೊಲ್ಸ್, ಎಲಿಜಬೆತ್ ಟೇಲರ್ ಹಾಗೂ ಡಯಾನಾ ರೋಸ್ ಸಾಲಿಗೆ ಈ ಬಂಟರ ಹುಡುಗಿ ಐಶ್ವರ್ಯಾ ರೈ ಸೇರಲಿದ್ದಾರೆ. |