ಉಗ್ರಗಾಮಿಗಳು ತಮ್ಮ ಕಬಂಧ ಬಾಹುವನ್ನು ವಿಶ್ವದ ಇತರೆಡೆಗೆ ಚಾಚಿದ್ದರೂ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಬುಡಕಟ್ಟು ಪ್ರದೇಶಗಳು ಅಮೆರಿಕದ ಭದ್ರತೆಗೆ ಅತಿದೊಡ್ಡ ಬೆದರಿಕೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ(ಎಫ್‌ಬಿಐ) ಹೇಳಿದೆ.
"ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಿಂದ ನಮಗೆ ಅತಿ ಹೆಚ್ಚು ಬೆದರಿಕೆ ಮುಂದುವರಿದಿದೆ" ಎಂದು ಎಫ್‌ಬಿಐ ಮುಖ್ಯಸ್ಥ ರಾಬರ್ಟ್ ಮುಲ್ಲರ್ ಹೇಳಿದ್ದಾರೆ.
ನವೆಂಬರ್‌ನಲ್ಲಿ ಮುಂಬೈನಲ್ಲಿ ನಡೆದಂತಹ ದಾಳಿಯು ಅಮೆರಿಕದ ಮಣ್ಣಿನಲ್ಲಿ ನಡೆಯುವಂತಹ ಸಾಧ್ಯತೆ ಇದೆ ಎಂದು ಮುಲ್ಲರ್ ಹೇಳಿದ್ದಾರೆ.
"ಅಮೆರಿಕದ ಮಣ್ಣಿನಲ್ಲಿ ಕಳೆದ ಏಳುವರ್ಷಕ್ಕಿಂತಲೂ ಅಧಿಕ ಸಮಯದಲ್ಲಿ ಭಯೋತ್ಪಾದನಾ ದಾಳಿ ನಡೆದಿಲ್ಲವಾದರೂ ಮುಂಬೈಯಲ್ಲಿ ಇತ್ತೀಚೆಗೆ ನಡೆದ ದಾಳಿಗಳಿಂದ ನಾವು ಸುರಕ್ಷಿತವಾಗಿಲ್ಲ" ಎಂದು ಅವರು ನುಡಿದರು.
ಭಯೋತ್ಪಾದಕರು ತಮ್ಮ ಜಾಲಗಳನ್ನು ಅತಿ ಕ್ಷಿಪ್ರವಾಗಿ ವಿಶ್ವದೆಲ್ಲೆಡೆ ಹರಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. |