ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತಕ್ಕೆ ಶಸ್ತ್ರಾಸ್ತ್ರ ಮಾರಾಟ, ಪಾಕಿಸ್ತಾನಕ್ಕಿಲ್ಲ: ಸ್ವಿಟ್ಜರ್‌‌ಲ್ಯಾಂಡ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತಕ್ಕೆ ಶಸ್ತ್ರಾಸ್ತ್ರ ಮಾರಾಟ, ಪಾಕಿಸ್ತಾನಕ್ಕಿಲ್ಲ: ಸ್ವಿಟ್ಜರ್‌‌ಲ್ಯಾಂಡ್
ರೈಫಲ್ಸ್ ಹಾಗೂ ಸ್ವಯಂಚಾಲಿತ ಗನ್ಸ್‌ಗಳನ್ನು ಭಾರತಕ್ಕೆ ಮಾರಾಟ ಮಾಡಲು ಸ್ವಿಸ್ ಕ್ಯಾಬಿನೆಟ್ ಅಂಕಿತ ಹಾಕಿದ್ದು, ಉಗ್ರರ ನಿಗ್ರಹದ ವಿಮಾನಗಳ ಪರಿಕರಗಳನ್ನು ರಫ್ತು ಮಾಡಬೇಕೆಂಬ ಪಾಕಿಸ್ತಾನದ ಬೇಡಿಕೆಯನ್ನು ತಿರಸ್ಕರಿಸಿದೆ.

ರಾಜಕೀಯ ಬಿಕ್ಕಟ್ಟು ಹೊಂದಿರುವ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಒದಗಿಸುವುದಿಲ್ಲ ಎಂದು ಸ್ವಿಸ್ ಸ್ಪಷ್ಟಪಡಿಸಿದೆ. ಪಾಕಿಸ್ತಾನಕ್ಕೆ ಉಳಿದ ಯುರೋಪಿಯನ್ ದೇಶಗಳು ಯಾವಾಗ ರಫ್ತನ್ನು ಪುನರಾರಂಭಿಸುತ್ತದೋ ಆಗ ನಾವು ನಮ್ಮ ನೀತಿಯನ್ನು ಪುನರ್ ಪರಿಶೀಲಿಸುವುದಾಗಿ ವಿತ್ತ ಸಚಿವಾಲಯದ ಮೂಲಗಳು ತಿಳಿಸಿರುವುದಾಗಿ ಸ್ವಿಸ್ ಇನ್ಫೋ ನ್ಯೂಸ್ ವೆಬ್‌ಸೈಟ್ ತಿಳಿಸಿದೆ.

ಕಳೆದ ವರ್ಷ ಸ್ವಿಸ್‌ನಿಂದ ಪಾಕಿಸ್ತಾನ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿಸಿತ್ತು. ಅದೇ ರೀತಿಯಲ್ಲಿ ಮಾನವ ಹಕ್ಕುಗಳ ಸ್ಥಿತಿ ತುಂಬಾ ಹದಗೆಟ್ಟಿರುವ ಈಜಿಪ್ಟ್ ಹಾಗೂ ಸೌದಿ ಅರೇಬಿಯಾ ದೇಶಗಳ ಶಸ್ತ್ರಾಸ್ತ್ರ ಬೇಡಿಕೆ ಮನವಿಯನ್ನು ಸ್ವಿಸ್ ಕ್ಯಾಬಿನೆಟ್ ಬುಧವಾರ ತಿರಸ್ಕರಿಸಿದೆ. ಭಾರತಕ್ಕೆ ರೈಪಲ್ಸ್, ಮೆಶಿನ್ ಗನ್ಸ್‌ಗಳನ್ನು ಮಾರಾಟ ಮಾಡಲು ಒಪ್ಪಿಗೆ ಸೂಚಿಸಿರುವುದಾಗಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್, ಅಫ್ಘಾನ್‌ ಆದಿವಾಸಿ ಪ್ರದೇಶಗಳು ಅಮೆರಿಕಕ್ಕೆ ಬೆದರಿಕೆ
ತಾಲಿಬಾನ್ ಉಗ್ರರಿಗೆ ಐಎಸ್‌ಐ ನೆರವು: ನ್ಯೂಯಾರ್ಕ್ ಟೈಮ್ಸ್
ಪಾಕಿಸ್ತಾನ: ಆತ್ಮಹತ್ಯಾ ದಾಳಿಗೆ 11 ಬಲಿ
ಬಾರ್ಬಿಗೆ ಮಾಡೆಲ್ ಆಗಲಿರುವ ಐಶ್ವರ್ಯಾ ರೈ ಬಚ್ಚನ್
ಪಾಕ್: ಆರು ವಿದೇಶಿ ಉಗ್ರರ ಬಲಿ
ಪಾಕ್: ಭಾರತೀಯ ಮೀನುಗಾರರ ಬಂಧನ