ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ನಡೆದ ಭಯೋತ್ಪಾದನಾ ದಾಳಿಯ ತನಿಖೆಗೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಯನ್ನು ಪಾಕಿಸ್ತಾನ ಗುರುವಾರ ಶ್ರೀಲಂಕಾಕ್ಕೆ ಹಸ್ತಾಂತರಿಸಿದೆ.
ಲಾಹೋರ್ ದಾಳಿಯ ಹಿಂದೆ ವಿದೇಶಿ ಕೈವಾಡ ಇರುವುದಾಗಿ ತಿಳಿಸಿರುವ ಪಾಕಿಸ್ತಾನ, ಇದು ಭದ್ರತಾ ವ್ಯವಸ್ಥೆಯ ಲೋಪದಿಂದ ದಾಳಿ ನಡೆದಿರುವುದಾಗಿಯೂ ತಿಳಿಸಿತ್ತು.
ಶ್ರೀಲಂಕಾದ ಹೈಕಮೀಷನರ್ ಜಯಲತ್ ವೀರಾಕ್ಕೋಡಿ ಅವರೊಂದಿಗೆ ದಾಳಿಯ ಕುರಿತು ಪ್ರಾಥಮಿಕ ತನಿಖೆಯ ವರದಿಯ ಕುರಿತು ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಚರ್ಚೆ ನಡೆಸಿದ್ದರು. ಅಲ್ಲದೇ ಬುಧವಾರ ವರದಿಯನ್ನು ಶ್ರೀಲಂಕಾ ಅಧಿಕಾರಿಗಳಿಗೆ ಹಸ್ತಾಂತರಿಸಿರುವುದಾಗಿ ಡಾನ್ ಪತ್ರಿಕೆ ವರದಿ ವಿವರಿಸಿದೆ.
ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ನಡೆದ ದಾಳಿ ಕುರಿತು ನಡೆಸಿದ ಪ್ರಾಥಮಿಕ ವರದಿಯನ್ವಯ, ಈ ದಾಳಿಯ ಹಿಂದೆ ವಿದೇಶಿ ಕೈವಾಡ ಇದ್ದು, ಇದು ಭದ್ರತಾ ವ್ಯವಸ್ಥೆ ಲೋಪ ಎಂದು ವರದಿ ತಿಳಿಸಿದೆ. |