ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಒಬಾಮಾ ಭಾರತದ ಜತೆ ಉತ್ತಮ ಸ್ನೇಹದ ಇಚ್ಚೆ: ಶ್ವೇತಭವನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಾಮಾ ಭಾರತದ ಜತೆ ಉತ್ತಮ ಸ್ನೇಹದ ಇಚ್ಚೆ: ಶ್ವೇತಭವನ
ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದುವ ನಿಟ್ಟಿನಲ್ಲಿ ಲಂಡನ್‌‌ನಲ್ಲಿ ಏಪ್ರಿಲ್ 2ರಂದು ಭಾರತದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರೊಂದಿಗೆ ನಡೆಯಲಿರುವ ಪ್ರಥಮ ಸಭೆಗಾಗಿ ಪೂರ್ವ ತಯಾರಿ ನಡೆಸುತ್ತಿರುವುದಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಆಶಾಭಾವ ವ್ಯಕ್ತಪಡಿಸಿದ್ದಾರೆಂದು ಶ್ವೇತಭವನದ ಮೂಲಗಳು ತಿಳಿಸಿದೆ.

ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಮೂಲಕ ತಮ್ಮ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಇಚ್ಚೆಯನ್ನು ಅಧ್ಯಕ್ಷರು ಹೊಂದಿದ್ದಾರೆಂದು ಶ್ವೇತಭವನದ ಮೂಲಗಳು ಹೇಳಿವೆ.

ಲಂಡನ್‌ನಲ್ಲಿ ಆರಂಭವಾಗಲಿರುವ ಜಿ-20ಶೃಂಗಸಭೆಯ ಸಂದರ್ಭದಲ್ಲಿ ಏಪ್ರಿಲ್ 2ರಂದು ಭಾರತದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರೊಂದಿಗೆ ಒಬಾಮಾ ಅವರು ಮಾತುಕತೆ ನಡೆಸಲಿದ್ದಾರೆ ಎಂದು ಶ್ವೇತಭವನದ ವಕ್ತಾರ ರೋಬರ್ಟ್ ಗಿಬ್ಸ್ ತಿಳಿಸಿದ್ದಾರೆ.

ಒಬಾಮಾ ಅವರು ಭಾರತದೊಂದಿಗಿನ ದ್ವಿಪಕ್ಷೀಯ ಮಾತುಕತೆಯೊಂದಿಗೆ ಭಾರತ-ಅಮೆರಿಕ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ದಳದ ಸಹಾಯಕ ವಕ್ತಾರ ಬೆಂಜಮಿನ್ ಚಾಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗಿನ ಪ್ರಥಮ ಮಾತುಕತೆ ಇದಾಗಿದ್ದು, ಇಬ್ಬರು ಮುಖಂಡರು ದ್ವಿಪಕ್ಷೀಯ, ಗ್ರಾಮೀಣ ಹಾಗೂ ಜಾಗತಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಅಲ್ಲದೇ ಅಫ್ಘಾನಿಸ್ತಾನ, ಪಾಕಿಸ್ತಾನದ ಪರಿಸ್ಥಿತಿ, ಹವಾಮಾನ ಬದಲಾವಣೆ ಮತ್ತು ಜಾಗತಿಕ ಆರ್ಥಿಕತೆ ಕುರಿತು ಮಾತುಕತೆ ನಡೆಯಲಿದೆ ಎಂದು ಅವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಾಹೋರ್ ದಾಳಿ: ಪ್ರಾಥಮಿಕ ವರದಿ ಲಂಕಾಕ್ಕೆ ಹಸ್ತಾಂತರ
ಭಾರತಕ್ಕೆ ಶಸ್ತ್ರಾಸ್ತ್ರ ಮಾರಾಟ, ಪಾಕಿಸ್ತಾನಕ್ಕಿಲ್ಲ: ಸ್ವಿಟ್ಜರ್‌‌ಲ್ಯಾಂಡ್
ಪಾಕ್, ಅಫ್ಘಾನ್‌ ಆದಿವಾಸಿ ಪ್ರದೇಶಗಳು ಅಮೆರಿಕಕ್ಕೆ ಬೆದರಿಕೆ
ತಾಲಿಬಾನ್ ಉಗ್ರರಿಗೆ ಐಎಸ್‌ಐ ನೆರವು: ನ್ಯೂಯಾರ್ಕ್ ಟೈಮ್ಸ್
ಪಾಕಿಸ್ತಾನ: ಆತ್ಮಹತ್ಯಾ ದಾಳಿಗೆ 11 ಬಲಿ
ಬಾರ್ಬಿಗೆ ಮಾಡೆಲ್ ಆಗಲಿರುವ ಐಶ್ವರ್ಯಾ ರೈ ಬಚ್ಚನ್