'ನೇಪಾಳದ ಪ್ರತಿಯೊಬ್ಬ ಪ್ರಜೆಯೂ ಪ್ರಾಥಮಿಕ ಸೈನಿಕ ತರಬೇತಿಯನ್ನು ಪಡೆಯಬೇಕಾದ ಅಗತ್ಯವಿದೆ' ಎಂಬುದಾಗಿ ರಾಜಪ್ರಭುತ್ವದ ವಿರುದ್ಧ ದಶಕಗಳ ಕಾಲ ಶಸ್ತ್ರಾಸ್ತ್ರ ಹೋರಾಟ ನಡೆಸಿ ಇದೀಗ ಕಳೆದ ಮೂರು ವರ್ಷಗಳ ಹಿಂದೆ ಮುಖ್ಯವಾಹಿನಿಗೆ ಬಂದಿರುವ ಸಿಪಿಎನ್ ಮಾವೋವಾದಿಗಳು ನೂತನ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದಾರೆ.
ದೇಶದ ಪ್ರತಿಯೊಬ್ಬ ಪ್ರಜೆಯೂ ಕಡ್ಡಾಯವಾಗಿ ಸೈನಿಕ ಶಿಕ್ಷಣವನ್ನು ಪಡೆಯಬೇಕು ಹಾಗೂ ಪ್ರಾಥಮಿಕ ಮಿಲಿಟರಿ ತರಬೇತಿ ಪಡೆಯಲು ಅನುಕೂಲವಾಗುವಂತೆ ಸಂವಿಧಾನದಲ್ಲಿ ತಿದ್ದುಪಡಿ ತರುವ ಮೂಲಕ ನೂತನ ಕಾನೂನನ್ನು ಜಾರಿಗೊಳಿಸಬೇಕೆಂದು ಆಡಳಿತಾರೂಢ ಮಾವೋವಾದಿಪಕ್ಷವನ್ನು ಒತ್ತಾಯಿಸಿದೆ.
ಆದರೆ ತಮ್ಮ ಪಕ್ಷ ಬಹುಪಕ್ಷೀಯ ಪ್ರಜಾಪ್ರಭುತ್ವವನ್ನು ಹೊಂದಿದೆ, ಆಡಳಿತ ಕಾನೂನು, ಜನರ ಹಿತ, ಮೂಲಭೂತ ಹಕ್ಕು ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡುವುದಾಗಿದೆ ಎಂದು ಪ್ರಧಾನಿ ಪ್ರಚಂಡ ತಿಳಿಸಿದ್ದಾರೆ.
ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ತಮ್ಮ ಪಕ್ಷ ಬೆಂಬಲ ಎಂದು ಒತ್ತಿ ಹೇಳಿದ ಅವರು, ಇದು ಕೇವಲ ರಾಜಕೀಯ ಒಗ್ಗಟ್ಟು ಮಾತ್ರವಲ್ಲ ಎಂದು ಸ್ಪಷ್ಟಪಡಿಸಿದರು. |