ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸೊಮಾಲಿ ಕಡಲ್ಗಳ್ಳರಿಂದ 2 ಹಡಗುಗಳ ಅಪಹರಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೊಮಾಲಿ ಕಡಲ್ಗಳ್ಳರಿಂದ 2 ಹಡಗುಗಳ ಅಪಹರಣ
ಮೆಶಿನ್‌ಗನ್‌ಗಳನ್ನು ಹೊಂದಿದ್ದ ಕಡಲ್ಗಳ್ಳರು ಗುರುವಾರ ನಾರ್ವೆಯ ಕೆಮಿಕಲ್ ಟ್ಯಾಂಕರನ್ನು ಸೊಮಾಲಿಯಾ ಕರಾವಳಿಯಲ್ಲಿ ಅಪಹರಿಸಿದ್ದಾರೆ ಎಂದು ಹಡಗಿನ ಮಾಲಕರು ಹೇಳಿದ್ದಾರೆ. ಇದೇ ಪ್ರದೇಶದಲ್ಲಿ ಗ್ರೀಕ್ ಮಾಲಕತ್ವದ ಇನ್ನೊಂದು ಚಿಕ್ಕ ಹಡಗು 24 ಗಂಟೆಗಳ ಒಳಗೆ ಅಪಹರಣಕ್ಕೀಡಾಗಿತ್ತು.

ಕಡಲ್ಗಳ್ಳರ ಹಾವಳಿಯಿಂದ ಬಾಧಿಸಲ್ಪಟ್ಟಿರುವ ಕೊಲ್ಲಿಯಲ್ಲಿ ಗಸ್ತು ತಿರುಗುತ್ತಿರುವ ಯು.ಎಸ್ ಫಿಪ್ತ್ ಫ್ಲೀಟ್ ಎರಡೂ ಅಪರಹಣವನ್ನು ದೃಢಪಡಿಸಿದೆ. ಎರಡೂ ಅಪಹರಣವು ಒಂದೇ ಪ್ರದೇಶದಲ್ಲಿ ನಡೆದಿದೆ ಎಂದು ಅದು ಹೇಳಿದೆ.

ನಾರ್ವೆ ಮಾಲಕತ್ವದ ಬೊ ಆಸಿರ್ ಎಂಬ 23,000 ಟನ್ ಹಡಗನ್ನು ಸೋಮಾಲಿ ಕರಾವಳಿಯಿಂದ 250 ಮೈಲಿ ದೂರದಲ್ಲಿ ಗುರವಾರ ಮುಂಜಾನೆ ಅಪಹರಿಸಲಾಗಿದೆ. ಗ್ರೀಕ್ ಮಾಲಕತ್ವದ 9,000 ತೂಗುವ ನಿಪಾಯಿಯ ಎಂಬ ಹಡಗನ್ನು 19 ಸಿಬ್ಬಂದಿಗಳ ಸಮೇತ 450 ಮೈಲಿ ದೂರದಲ್ಲಿ ಬುಧವಾರ ಅಪರಾಹ್ನ ಅಪಹರಿಸಲಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಈ ಎರಡೂ ಹಡಗುಗಳು ಕೆಮಿಕಲ್ ಟಾಂಕರ್‌ಗಳಾಗಿವೆ. ಆದರೆ ಇವುಗಳಲ್ಲಿ ಏನನ್ನು ಸಾಗಿಸಲಾಗುತ್ತಿತ್ತು ಎಂಬುದನ್ನು ಬಹಿರಂಗ ಪಡಿಸಲಾಗಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೋಮಾಲಿಯಾ, ಕಡಲ್ಗಳ್ಳರು, ಗ್ರೀಕ್
ಮತ್ತಷ್ಟು
ರಶ್ಯ: ಅಪಘಾತಕ್ಕೆ 25 ಬಲಿ
ಬಾಗ್ದಾದ್: ಕಾರ್‌ ಬಾಂಬ್‌ ಸ್ಫೋಟಕ್ಕೆ 20 ಬಲಿ
ನೇಪಾಳದ ಪ್ರತಿ ಪ್ರಜೆಗೂ ಮಿಲಿಟರಿ ತರಬೇತಿ ಅಗತ್ಯ: ಸಿಪಿಎನ್-ಎಂ
ಒಬಾಮಾ ಭಾರತದ ಜತೆ ಉತ್ತಮ ಸ್ನೇಹದ ಇಚ್ಚೆ: ಶ್ವೇತಭವನ
ಲಾಹೋರ್ ದಾಳಿ: ಪ್ರಾಥಮಿಕ ವರದಿ ಲಂಕಾಕ್ಕೆ ಹಸ್ತಾಂತರ
ಭಾರತಕ್ಕೆ ಶಸ್ತ್ರಾಸ್ತ್ರ ಮಾರಾಟ, ಪಾಕಿಸ್ತಾನಕ್ಕಿಲ್ಲ: ಸ್ವಿಟ್ಜರ್‌‌ಲ್ಯಾಂಡ್