ಆರ್ಥಿಕ ಹಿಂಜರಿತದಿಂದ ಕೆಂಗೆಟ್ಟಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಮತ್ತಷ್ಟು ನೌಕರರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಎಚ್ಚರಿಕೆ ನೀಡಿದ್ದಾರೆ.ಇಲ್ಲಿನ ಟೌನ್ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಆನ್ ಲೈನ್ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಅವರು, ಆರ್ಥಿಕ ಹಿಂಜರಿತದಿಂದಾಗಿ ಮತ್ತಷ್ಟು ಉದ್ಯೋಗ ಕಡಿತದ ಸಾಧ್ಯತೆ ಬಗ್ಗೆ ಹೇಳಿದರು.ಪ್ರಸಕ್ತ ಸಂದರ್ಭದಲ್ಲಿ ನಾವು ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವ ಪರಿಣಾಮ ಹೆಚ್ಚಿನ ನೌಕರರ ಉದ್ಯೋಗಕ್ಕೆ ಕತ್ತರಿ ಬೀಳಲಿದೆ ಎಂಬುದಾಗಿ ವಿವರಣೆ ನೀಡಿದರು. ದೇಶದಲ್ಲಿನ ಸುಮಾರು 70ಸಾವಿರ ಜನರು ಅಧ್ಯಕ್ಷ ಒಬಾಮ ಅವರಿಗೆ ಉದ್ಯೋಗ ಕುರಿತಾಗಿ ಪ್ರಶ್ನೆಯನ್ನು ಕಳುಹಿಸಿದ್ದರು. |