ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್‌ಗೆ 500ಮಿ.ಡಾ.ಬಡ್ಡಿರಹಿತ ಸಾಲ: ವರ್ಲ್ಡ್ ಬ್ಯಾಂಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್‌ಗೆ 500ಮಿ.ಡಾ.ಬಡ್ಡಿರಹಿತ ಸಾಲ: ವರ್ಲ್ಡ್ ಬ್ಯಾಂಕ್
ಆರ್ಥಿಕ ಹಿಂಜರಿತದ ಹೊಡೆತದಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಆರ್ಥಿಕ ಚೇತರಿಕೆಗಾಗಿ ಸುಮಾರು 500ಮಿಲಿಯನ್ ಡಾಲರ್ ಬಡ್ಡಿರಹಿತ ಸಾಲ ನೀಡಲು ವಿಶ್ವಬ್ಯಾಂಕ್ ಸಮ್ಮತಿ ನೀಡಿದೆ.

ಆರ್ಥಿಕ ಪುನರ್ ಚೇತರಿಕೆಗಾಗಿ ಪಾಕಿಸ್ತಾನಕ್ಕೆ ಬಡ್ಡಿರಹಿತ ಸಾಲವನ್ನು ನೀಡುತ್ತಿದ್ದು, ಇದರಿಂದ ಪಾಕ್ ಮತ್ತೆ ಆರ್ಥಿಕವಾಗಿ ಸದೃಢವಾಗಲಿದೆ ಎಂದು ವರ್ಲ್ಡ್ ಬ್ಯಾಂಕ್ ತಿಳಿಸಿದೆ.

ಅಂತಾರಾಷ್ಟ್ರೀಯ ಅಭಿವೃದ್ದಿ ಅಸೋಸಿಯೇಷನ್(ಐಡಿಎ)‌ನಿಂದ ಈ ಸಾಲ ನೀಡಲಾಗಿದ್ದು, ಸಾಲದ ಮರುಪಾವತಿಗಾಗಿ 10ವರ್ಷಗಳಿಂದ 35ವರ್ಷಗಳ ಹೆಚ್ಚುವರಿ ಅವಧಿ ನೀಡಲಾಗಿದೆ ಎಂದು ವರ್ಲ್ಡ್ ಬ್ಯಾಂಕ್ ಹೇಳಿಕೆಯಲ್ಲಿ ವಿವರಿಸಿದೆ.

ಪಾಕಿಸ್ತಾನ ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸಾಕಷ್ಟು ನಷ್ಟ ಅನುಭವಿಸಿರುವುದಾಗಿ ವಿಶ್ವಬ್ಯಾಂಕ್ ತಿಳಿಸಿದೆ. ದೇಶದ ಹಣದುಬ್ಬರ ಕೂಡ ಸಾಕಷ್ಟು ಹೊಡೆತ ನೀಡಿದ್ದು, ಆ ಕಾರಣಕ್ಕಾಗಿ ಬಡ್ಡಿರಹಿತ ಸಾಲ ನೀಡಲಾಗಿದೆ ಎಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕದಲ್ಲಿ ಮತ್ತಷ್ಟು ನೌಕರರಿಗೆ ಕತ್ತರಿ: ಒಬಾಮಾ
ಸೊಮಾಲಿ ಕಡಲ್ಗಳ್ಳರಿಂದ 2 ಹಡಗುಗಳ ಅಪಹರಣ
ರಶ್ಯ: ಅಪಘಾತಕ್ಕೆ 25 ಬಲಿ
ಬಾಗ್ದಾದ್: ಕಾರ್‌ ಬಾಂಬ್‌ ಸ್ಫೋಟಕ್ಕೆ 20 ಬಲಿ
ನೇಪಾಳದ ಪ್ರತಿ ಪ್ರಜೆಗೂ ಮಿಲಿಟರಿ ತರಬೇತಿ ಅಗತ್ಯ: ಸಿಪಿಎನ್-ಎಂ
ಒಬಾಮಾ ಭಾರತದ ಜತೆ ಉತ್ತಮ ಸ್ನೇಹದ ಇಚ್ಚೆ: ಶ್ವೇತಭವನ