ಶಸ್ತ್ರಾಸ್ತ್ರ ತ್ಯಜಿಸಿ ಷರತ್ತು ರಹಿತವಾಗಿ ತಾಲಿಬಾನ್ ಉಗ್ರಗಾಮಿ ಸಂಘಟನೆಗಳೊಂದಿಗೆ ಮಾತುಕತೆ ನಡೆಸಲು ತಯಾರಿರುವುದಾಗಿ ಬ್ರಿಟನ್‌ನ ರಕ್ಷಣಾ ಕಾರ್ಯದರ್ಶಿ ಜಾನ್ ಹಟ್ಟನ್ ಆಹ್ವಾನ ನೀಡಿದ್ದಾರೆ.
ಶಸ್ತ್ರಾಸ್ತ್ರ ತ್ಯಜಿಸಿ, ಷರತ್ತು ರಹಿತ ಮಾತುಕತೆಗೆ ಸಿದ್ದ ಎಂದಿರುವ ಬ್ರಿಟನ್, ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಬೆಂಬಲ ನೀಡುವುದಾಗಿಯೂ ಈ ಸಂದರ್ಭದಲ್ಲಿ ತಿಳಿಸಿದೆ.
ಈ ಮಾತುಕತೆ ತಾಲಿಬಾನ್ ಶಸ್ತ್ರಾಸ್ತ್ರ ತ್ಯಜಿಸುವ ಮೂಲಕ ಮಾತ್ರ ಸಾಧ್ಯವಾಗಲಿದೆ. ಅಲ್ಲದೇ ಪ್ರಜಾಪ್ರಭುತ್ವದ ಸ್ಥಾಪನೆಗೂ ಅನುಕೂಲವಾಗಲಿದೆ. ಈ ಅಭಿಪ್ರಾಯವನ್ನು ಅಲ್ಲಿನ ಜನರು ವ್ಯಕ್ತಪಡಿಸಿದ್ದಾರೆ. ನಮ್ಮಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿದರು.
ತಾಲಿಬಾನ್ ನಿಜಕ್ಕೂ ಮುಕ್ತ ಮನಸ್ಸಿನಿಂದ ಮುಂದಾದರೆ ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವದ ಸ್ಥಾಪನೆ ಸಾಧ್ಯವಿದೆ ಎಂದು ಜಾನ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಆದರೆ ಪಾಶ್ಚಾಮಾತ್ಯ ದೇಶಗಳ ನೀತಿಯನ್ನು ಪುನರ್ ಪರಿಶೀಲಿಸಬೇಕೆಂಬ ಮೂಲಭೂತವಾದಿ ಭಯೋತ್ಪಾದಕರ ಬೇಡಿಕೆ ಈಡೇರಿಕೆ ಅಸಾಧ್ಯವಾದದ್ದು ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. |