ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ಮಸೀದಿಯಲ್ಲಿ ಬಾಂಬ್ ಸ್ಫೋಟ: 70 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಮಸೀದಿಯಲ್ಲಿ ಬಾಂಬ್ ಸ್ಫೋಟ: 70 ಸಾವು
ಭಯೋತ್ಪಾದನೆ ಹಾವಳಿಯಿಂದ ಮತ್ತು ರಾಜಕೀಯ ಅಸ್ಥಿರತೆಯಿಂದ ಜರ್ಝರಿತವಾಗಿರುವ ಪಾಕಿಸ್ತಾನದ ಮಸೀದಿಯೊಂದರಲ್ಲಿ ಶುಕ್ರವಾರ ಪ್ರಬಲ ಬಾಂಬ್ ಒಂದು ಸ್ಫೋಟಿಸಿ, 70ಮಂದಿ ಸಾವನ್ನಪ್ಪಿದ್ದು, 50ಜನರು ಗಾಯಗೊಂಡಿರುವುದಾಗಿ ಟಿವಿ ಮಾಧ್ಯಮದ ವರದಿಗಳು ತಿಳಿಸಿವೆ.

ಪಾಕಿಸ್ತಾನದ ಖೈಬರ್ ಪ್ರದೇಶದ ಜಾಮ್ರುದ್ ಎಂಬಲ್ಲಿನ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನಾ ಸಮಯದಲ್ಲಿ ಬಾಂಬ್ ಸ್ಫೋಟಿಸಿದ್ದು, ಸ್ಫೋಟದ ರಭಸಕ್ಕೆ ಮಸೀದಿ ಪೂರ್ತಿ ಧರಾಶಾಯಿಯಾಗಿದೆ.

ಘಟನೆಯಲ್ಲಿ 70ಮಂದಿ ಬಲಿಯಾಗಿದ್ದು, ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವ 46 ಮೃತದೇಶಗಳನ್ನು ಹೊರ ತೆಗೆಯಲಾಗಿದ್ದು, ಉಳಿದ ಶವಗಳನ್ನು ಹೊರತೆಗೆಯುವ ನಿಟ್ಟಿನಲ್ಲಿ ಶೋಧ ಕಾರ್ಯ ಬಿರುಸಿನಿಂದ ಸಾಗಿರುವುದಾಗಿ ಪೊಲೀಸ್ ಅಧಿಕಾರಿ ತಾರಿಕ್ ಹಯಾತ್ ಖಾನ್ ತಿಳಿಸಿದ್ದಾರೆ.

ಪಾಕ್-ಅಫ್ಘಾನ್ ಗಡಿಭಾಗದಲ್ಲಿ ಈ ಭೀಕರ ಸ್ಫೋಟ ಸಂಭವಿಸಿದ್ದು, ಈ ದಾಳಿಯ ಹಿಂದೆ ಬೈತುಲ್ಲಾ ಮೆಹ್ಸೂದ್ ನೇತೃತ್ವದ ತೇಹ್ರಿಕ್ ಇ ತಾಲಿಬಾನ್ ಕೈವಾಡ ಇದೆ ಎಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಾಲಿಬಾನ್ ಜತೆ ಷರತ್ತು ರಹಿತ ಮಾತುಕತೆಗೆ ಸಿದ್ದ: ಬ್ರಿಟನ್
ಪಾಕ್‌ಗೆ 500ಮಿ.ಡಾ.ಬಡ್ಡಿರಹಿತ ಸಾಲ: ವರ್ಲ್ಡ್ ಬ್ಯಾಂಕ್
ಅಮೆರಿಕದಲ್ಲಿ ಮತ್ತಷ್ಟು ನೌಕರರಿಗೆ ಕತ್ತರಿ: ಒಬಾಮಾ
ಸೊಮಾಲಿ ಕಡಲ್ಗಳ್ಳರಿಂದ 2 ಹಡಗುಗಳ ಅಪಹರಣ
ರಶ್ಯ: ಅಪಘಾತಕ್ಕೆ 25 ಬಲಿ
ಬಾಗ್ದಾದ್: ಕಾರ್‌ ಬಾಂಬ್‌ ಸ್ಫೋಟಕ್ಕೆ 20 ಬಲಿ