ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತೀಯ ಮೀನುಗಾರ ಪಾಕ್ ಜೈಲಿನಲ್ಲಿ ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತೀಯ ಮೀನುಗಾರ ಪಾಕ್ ಜೈಲಿನಲ್ಲಿ ಸಾವು
ಮೂರು ದಿನಗಳ ಹಿಂದೆ ಪಾಕಿಸ್ತಾನಿ ಅಧಿಕಾರಿಗಳಿಂದ ಬಂಧನಕ್ಕೀಡಾಗಿದ್ದ ಮೀನುಗಾರನೊಬ್ಬ ಪಾಕಿಸ್ತಾನಿ ಜೈಲಿನಲ್ಲಿ ಸಾವಿಗೀಡಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಬಂಬಾನಿಯ ಲಾಕ ಎಂಬ 47ರ ಹರೆಯದ ಮೀನುಗಾರ ಮೂರುದಿನಗಳ ಹಿಂದೆ ಪಾಕಿಸ್ತಾನಿ ಅಧಿಕಾರಿಗಳಿಂದ ಬಂಧನಕ್ಕೀಡಾಗಿದ್ದ 74 ಮಂದಿಯಲ್ಲಿ ಸೇರಿದ್ದರು.

ಗುಜರಾತ್ ನಿವಾಸಿಯಾಗಿರುವ ಇವರು ಬಂಧಕ್ಕೀಡಾಗಿದ್ದ ವೇಳೆ ಗಂಭೀರ ಕಾಯಿಲೆಗೊಳಗಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಒಯ್ಯುತ್ತಿದ್ದ ವೇಳೆಯೇ ಹಾದಿಯಲ್ಲಿ ಸಾವನ್ನಿಪ್ಪಿದ್ದು, ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿನ್ನಾ ಸ್ನಾತಕೋತ್ತರ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಂಧನಕ್ಕೀಡಾಗಿರುವ ಉಳಿದ 73 ಮೀನುಗಾರರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಎಪ್ರಿಲ್ 2ರ ತನಕ ನ್ಯಾಯಾಂಗ ಬಂಧಕ್ಕೀಡುಮಾಡಲಾಗಿದೆ. ಅಧಿಕಾರಿಗಳು 13 ದೋಣಿಗಳನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೀನುಗಾರ, ಪಾಕಿಸ್ತಾನ, ಜೈಲು
ಮತ್ತಷ್ಟು
ಪಾಕ್ ಮಸೀದಿಯಲ್ಲಿ ಬಾಂಬ್ ಸ್ಫೋಟ: 70 ಸಾವು
ತಾಲಿಬಾನ್ ಜತೆ ಷರತ್ತು ರಹಿತ ಮಾತುಕತೆಗೆ ಸಿದ್ದ: ಬ್ರಿಟನ್
ಪಾಕ್‌ಗೆ 500ಮಿ.ಡಾ.ಬಡ್ಡಿರಹಿತ ಸಾಲ: ವರ್ಲ್ಡ್ ಬ್ಯಾಂಕ್
ಅಮೆರಿಕದಲ್ಲಿ ಮತ್ತಷ್ಟು ನೌಕರರಿಗೆ ಕತ್ತರಿ: ಒಬಾಮಾ
ಸೊಮಾಲಿ ಕಡಲ್ಗಳ್ಳರಿಂದ 2 ಹಡಗುಗಳ ಅಪಹರಣ
ರಶ್ಯ: ಅಪಘಾತಕ್ಕೆ 25 ಬಲಿ