ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಗಾಂಧಿಗಿರಿ ಕೈಹಿಡಿದ ಪ್ಯಾಲೆಸ್ತೇನಿಗರು...
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಾಂಧಿಗಿರಿ ಕೈಹಿಡಿದ ಪ್ಯಾಲೆಸ್ತೇನಿಗರು...
ಭಾರತದ ಸ್ವಾತಂತ್ರ್ಯಕ್ಕಾಗಿ ಕೆಲವು ದಶಕಗಳ ಕಾಲ ಬ್ರಿಟಿಷರ ವಿರುದ್ದ ಅಹಿಂಸಾ ಚಳವಳಿ ನಡೆಸಿದ ಮಹಾತ್ಮಾ ಗಾಂಧಿಯ ತತ್ವಾದರ್ಶ ರಕ್ತಪಾತದಿಂದ ಕಂಗೆಟ್ಟಿರುವ ಪ್ಯಾಲೆಸ್ತೇನಿಯನ್‌‌ರಿಗೂ ಆಪ್ತವಾಗತೊಡಗಿದ್ದು, ಪ್ಯಾಲೆಸ್ತೇನ್‌ನ ಉತ್ತರ ವೆಸ್ಟ್ ಬ್ಯಾಂಕ್‌ನ 50ಹಳ್ಳಿಗಳು ಇಸ್ರೇಲ್ ಸಾಮಾಗ್ರಿಗಳನ್ನು ಬಹಿಷ್ಕರಿಸುವ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ.

ಗಾಂಧಿ ತತ್ವದ ಅಹಿಂಸಾ ಮಾರ್ಗದ ಫಲಿತಾಂಶದಿಂ ಬದಲಾವಣೆ ತುಂಬಾ ನಿಧಾನ ಎಂಬುದನ್ನು ನಾವು ಅರಿತಿದ್ದೇವೆ. ಹಾಗಾಗಿ ಬ್ರಿಟಿಷರ ವಿರುದ್ಧ ಗಾಂಧಿ ಕೈಗೊಂಡ ಉಪ್ಪಿನ ಸತ್ಯಾಗ್ರಹದಂತೆ ನಾವು ಕೂಡ ಅಹಿಂಸಾ ಪ್ರತಿಭಟನೆ ನಡೆಸುವುದಾಗಿ ಪಾಪ್ಯುಲರ್ ಕಮಿಟಿಯ ಅಧ್ಯಕ್ಷ ಖಾಲಿದ್ ಮನ್ಸೂರ್ ತಿಳಿಸಿರುವುದಾಗಿ ಪ್ಯಾಲೆಸ್ತೇನಿಯನ್ ನ್ಯೂಸ್ ಏಜೆನ್ಸಿ ಹೇಳಿದೆ.

ಪ್ರತಿವರ್ಷ ಇಸ್ರೇಲ್‌ನಿಂದ 2.6ಬಿಲಿಯನ್‌‌ನಷ್ಟು ಸಾಮಾಗ್ರಿಗಳನ್ನು ಪ್ಯಾಲೆಸ್ತೇನ್ ಬಳಸುತ್ತಿರುವುದಾಗಿ ಮನ್ಸೂರ್ ತಿಳಿಸಿದ್ದಾರೆ. ಅಲ್ಲದೇ 30ಮಿಲಿಯನ್‌ಷ್ಟು ಔಷಧಗಳನ್ನು ಪ್ಯಾಲೆಸ್ತೇನ್ ಬಳಸುತ್ತದೆ. 10ಮಿಲಿಯನ್ ಚಿನ್ನಾಭರಣಗಳನ್ನು ಪ್ರತಿವರ್ಷ ಇಸ್ರೇಲ್ ಉತ್ಪಾದಿಸುತ್ತದೆ ಎಂದು ತಿಳಿಸಿದರು.

ಆ ನಿಟ್ಟಿನಲ್ಲಿ ನಾವು ಇಸ್ರೇಲ್‌ನ ವಸ್ತುಗಳನ್ನು ಬಹಿಷ್ಕರಿಸುವ ಕುರಿತು 50 ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ನಡೆಸುವುದಾಗಿ ತಿಳಿಸಿದ ಮನ್ಸೂರ್, ಈ ಬಗ್ಗೆ ಶಾಲೆಗಳಲ್ಲೂ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತೀಯ ಮೀನುಗಾರ ಪಾಕ್ ಜೈಲಿನಲ್ಲಿ ಸಾವು
ಪಾಕ್ ಮಸೀದಿಯಲ್ಲಿ ಬಾಂಬ್ ಸ್ಫೋಟ: 70 ಸಾವು
ತಾಲಿಬಾನ್ ಜತೆ ಷರತ್ತು ರಹಿತ ಮಾತುಕತೆಗೆ ಸಿದ್ದ: ಬ್ರಿಟನ್
ಪಾಕ್‌ಗೆ 500ಮಿ.ಡಾ.ಬಡ್ಡಿರಹಿತ ಸಾಲ: ವರ್ಲ್ಡ್ ಬ್ಯಾಂಕ್
ಅಮೆರಿಕದಲ್ಲಿ ಮತ್ತಷ್ಟು ನೌಕರರಿಗೆ ಕತ್ತರಿ: ಒಬಾಮಾ
ಸೊಮಾಲಿ ಕಡಲ್ಗಳ್ಳರಿಂದ 2 ಹಡಗುಗಳ ಅಪಹರಣ