ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ(ಐಎಇಎ)ಯ ನೂತನ ಮುಖ್ಯಸ್ಥರ ಆಯ್ಕೆಯ ಮೊದಲ ಪ್ರಯತ್ನ ವಿಫಲವಾಗಿದ್ದು, ಇದರಿಂದಾಗಿ ನೂತನ ಅಭ್ಯರ್ಥಿಗಳಿಗೆ ಹಾದಿ ಸುಗಮವಾದಂತಾಗಿದೆ.
ಐಎಇಎಯ ಹಾಲಿ ಮುಖ್ಯಸ್ಥ ಮೊಹಮ್ಮದ್ ಅಲ್‌ಬರಾದಿ ಅವರು ನವೆಂಬರ್ ತಿಂಗಳಲ್ಲಿ ನಿವೃತ್ತರಾಗುವ ಕಾರಣ ಅವರ ಸ್ಥಾನ ತೆರವಾಗುತ್ತಿದ್ದು, ಇದಕ್ಕಾಗಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಜಪಾನಿನ ಯುಕಿಯ ಅಮಾನೋ ಹಾಗೂ ದಕ್ಷಿಣ ಆಫ್ರಿಕಾದ ಅಬ್ದುಲ್ ಸಮದ್ ಮಿಂಟಿ ಅವರು ಸ್ಫರ್ಧೆಯಲ್ಲಿದ್ದರು.
ಆದರೆ ಮುಖ್ಯಸ್ಥರ ಆಯ್ಕೆಯ ರಹಸ್ಯ ಮತದಾನದ ಮೂಲಕ ನಡೆದಿದ್ದು, ಈ ಇಬ್ಬರೂ ಅವಶ್ಯವಿರುವ ಮೂರನೇ ಎರಡರಷ್ಟು ಬಹುಮತ ಗಳಿಸುವಲ್ಲಿ ವಿಫಲರಾಗಿದ್ದಾರೆ ಎಂಬುದಾಗಿ ಅನಾಮಧೇಯರಾಗಿ ಉಳಿಯಲು ಬಯಸಿರುವ ರಾಜತಾಂತ್ರಿಕರೊಬ್ಬರು ಹೇಳಿದ್ದಾರೆ.
ಹೊಸ ವ್ಯಕ್ತಿಗಳು ತಮ್ಮ ಅಭ್ಯರ್ಥಿತನವನ್ನು ಘೋಷಿಸಲು ಅನುಕೂಲವಾಗುವಂತೆ ಸಭೆಯನ್ನು ಹಲವು ವಾರಗಳ ಕಾಲ ಮುಂದೂಡಲಾಗಿದೆ. |