ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಫ್ಘಾನ್-ಪಾಕ್‌ಗೆ ಅಮೆರಿಕದ ನೆರವು ಬೇಕಾಗಿದೆ: ಬರಾಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಫ್ಘಾನ್-ಪಾಕ್‌ಗೆ ಅಮೆರಿಕದ ನೆರವು ಬೇಕಾಗಿದೆ: ಬರಾಕ್
ಪಾಕಿಸ್ತಾನದಲ್ಲಿ ಭದ್ರವಾಗಿ ತಳವೂರಿರುವ ಒಸಾಮಾ ಬಿನ್ ಲಾಡೆನ್ ಹಾಗೂ ಅಲ್ ಖಾಯಿದಾ ಬೆಂಬಲಿತ ಉಗ್ರಗಾಮಿ ಗುಂಪುಗಳು ಅಮೆರಿಕದ ಮೇಲೆ ಮತ್ತೆ ದಾಳಿ ನಡೆಸುವ ಸಂಚು ನಡೆಸಿವೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ತಿಳಿಸಿದ್ದು, ಪ್ರಪಂಚದಲ್ಲಿಯೇ ಪಾಕ್ ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂದು ಆರೋಪಿಸಿದರು.

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿರುವ ಉಗ್ರರ ಅಡಗುತಾಣಗಳನ್ನು ನಾಶಗೊಳಿಸುವ ನಿಟ್ಟಿನಲ್ಲಿ ಅಫ್ಘಾನ್ ಮತ್ತು ಪಾಕಿಸ್ತಾನಕ್ಕೆ ಹೆಚ್ಚಿನ ನೆರವು ನೀಡಬೇಕಾದ ಅಗತ್ಯವಿದೆ ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಉಗ್ರರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಪಾಕ್‌ಗೆ ಅಮೆರಿಕದ ನೆರವು ಬೇಕಾಗಿದೆ ಎಂದರು. ಮುಂದಿನ 5ವರ್ಷಗಳಲ್ಲಿ ಪಾಕ್‌ಗೆ 1.5ಬಿಲಿಯನ್ ಡಾಲರ್‌ನಷ್ಟು ನೆರವು ನೀಡಲಾಗುವು ಎಂದು ಬರಾಕ್ ಘೋಷಿಸಿದರು.

ಅಫ್ಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಪ್ರಥಮ ಹಂತವಾಗಿ 4ಸಾವಿರ ತರಬೇತುದಾರ ಸೈನಿಕರನ್ನು ರವಾನಿಸಲಾಗುವುದು. ಒಟ್ಟು 17ಸಾವಿರ ಸೈನಿಕರನ್ನು ಅಫ್ಘಾನ್‌ಗೆ ರವಾನಿಸಲು ನಿರ್ಧರಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಅಲ್ ಖಾಯಿದಾ ಪಾಕಿಸ್ತಾನದಲ್ಲಿ ಭದ್ರವಾಗಿ ತಳವೂರಿದೆ. ಆ ನಿಟ್ಟಿನಲ್ಲಿ ಉಗ್ರರ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬರಾಕ್ ಆಗ್ರಹಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೂತನ ಮುಖ್ಯಸ್ಥರ ಆಯ್ಕೆಗೆ ಐಎಇಎ ವಿಫಲ
ಗಾಂಧಿಗಿರಿ ಕೈಹಿಡಿದ ಪ್ಯಾಲೆಸ್ತೇನಿಗರು...
ಭಾರತೀಯ ಮೀನುಗಾರ ಪಾಕ್ ಜೈಲಿನಲ್ಲಿ ಸಾವು
ಪಾಕ್ ಮಸೀದಿಯಲ್ಲಿ ಬಾಂಬ್ ಸ್ಫೋಟ: 70 ಸಾವು
ತಾಲಿಬಾನ್ ಜತೆ ಷರತ್ತು ರಹಿತ ಮಾತುಕತೆಗೆ ಸಿದ್ದ: ಬ್ರಿಟನ್
ಪಾಕ್‌ಗೆ 500ಮಿ.ಡಾ.ಬಡ್ಡಿರಹಿತ ಸಾಲ: ವರ್ಲ್ಡ್ ಬ್ಯಾಂಕ್