ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಆಫ್ಘಾನಿಸ್ತಾನಕ್ಕೆ ಹೆಚ್ಚುವರಿ 4000 ಅಮೆರಿಕ ಪಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಫ್ಘಾನಿಸ್ತಾನಕ್ಕೆ ಹೆಚ್ಚುವರಿ 4000 ಅಮೆರಿಕ ಪಡೆ
ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಹೋರಾಟಕ್ಕೆ ಹೆಚ್ಚುವರಿಯಾಗಿ 4000 ಪಡೆಗಳನ್ನು ಕಳಿಸುವುದಾಗಿ ಅಧ್ಯಕ್ಷ ಬರಾಕ್ ಒಬಾಮಾ ಶುಕ್ರವಾರ ಪ್ರಕಟಿಸಿದ್ದಾರೆ.

ಆಫ್ಘನ್ನರು ತಮ್ಮ ರಾಷ್ಟ್ರದ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಕೆಲವು ಕ್ರಮಗಳನ್ನು ಒಬಾಮಾ ಪ್ರಕಟಿಸಿದರು. ಭಯೋತ್ಪಾದನೆ ವಿರುದ್ಧ ಸ್ವತಃ ಆಫ್ಘನ್ನರು ಅಂತಿಮವಾಗಿ ಹೋರಾಡಿ ಗೆಲ್ಲಬೇಕು ಮತ್ತು ರಾಷ್ಟ್ರದ ಸ್ಥಿರತೆ ಮತ್ತು ಅಭಿವೃದ್ಧಿಗೆ ದುಡಿಯಬೇಕು ಎಂದು ಒಬಾಮಾ ಸೂಚ್ಯವಾಗಿ ತಿಳಿಸಿದರು.

'ಸುಮಾರು 134,000 ಆಫ್ಘಾನ್ ಸೇನೆ ಮತ್ತು 82,000 ಪೊಲೀಸ್ ಪಡೆಯ ನಿರ್ಮಾಣಕ್ಕೆ ನಮ್ಮ ಪ್ರಯತ್ನಗಳನ್ನು ಚುರುಕುಗೊಳಿಸಬೇಕು. ಇದರಿಂದ 2011ರೊಳಗೆ ನಾವು ಗುರಿಯನ್ನು ಮುಟ್ಟುತ್ತೇವೆ. ನಾವು ಭದ್ರತಾ ಜವಾಬ್ದಾರಿಯನ್ನು ಆಫ್ಘನ್ನರ ಹೆಗಲಿಗೆ ಹೇರುವುದರಿಂದ ಆಫ್ಘನ್ ಪಡೆಯಲ್ಲಿ ಹೆಚ್ಚಳವು ಅತ್ಯಂತ ಅಗತ್ಯವಾಗಿದೆ' ಎಂದು ಒಬಾಮಾ ಹೇಳಿದ್ದಾರೆ.

ಆಫ್ಘನ್ ಭದ್ರತಾ ಪಡೆಗಳನ್ನು ಬಲಪಡಿಸಲು ಮತ್ತು ಆಫ್ಘನ್ ಸರ್ಕಾರವನ್ನು ಅತ್ಯಂತ ದಕ್ಷ ಮತ್ತು ಪರಿಣಾಮಕಾರಿಯಾಗಿ ಮಾಡಲು ಅವರು ಅನೇಕ ಕ್ರಮಗಳನ್ನು ಪ್ರಕಟಿಸಿದರು.

ಆಫ್ಘಾನಿಸ್ತಾನಕ್ಕೆ 17,000 ಹೆಚ್ಚುವರಿ ಪಡೆಗಳನ್ನು ಕಳಿಸುವುದಲ್ಲದೇ, ಆಫ್ಘನ್ ಭದ್ರತಾ ಪಡೆ ಬಲಪಡಿಸಲು 4000 ಪಡೆಗಳನ್ನು ಕಳಿಸುವ ನಿರ್ಧಾರವನ್ನು ಒಬಾಮಾ ಪ್ರಕಟಿಸಿದರು. ಆಫ್ಘಾನಿಸ್ತಾನ ಮುಂಬರುವ ವರ್ಷಗಳಲ್ಲಿ ಸ್ವಾವಲಂಬಿಯಾಗಲು ಭಾರೀ ಸಂಖ್ಯೆಯಲ್ಲಿ ನಾಗರಿಕರು ಮತ್ತು ವೃತ್ತಿಪರರನ್ನು ಕಳಿಸುವುದಾಗಿ ಒಬಾಮಾ ಪ್ರಕಟಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಂಡೊನೇಷ್ಯಾ: ಅಣೆಕಟ್ಟು ಕುಸಿತದಿಂದ 67 ಬಲಿ
ಉ.ಕೊರಿಯ ರಾಕೆಟ್ ಉಡಾವಣೆ ತಡೆಗೆ ರಷ್ಯಾ ಆಗ್ರಹ
ಅಬ್ದುಲ್ ಕಲಾಂಗೆ 'ಹೂವರ್ ಪ್ರಶಸ್ತಿ'
ಅಣೆಕಟ್ಟು ಒಡೆದು 58 ಸಾವು
ಅಫ್ಘಾನ್-ಪಾಕ್‌ಗೆ ಅಮೆರಿಕದ ನೆರವು ಬೇಕಾಗಿದೆ: ಬರಾಕ್
ನೂತನ ಮುಖ್ಯಸ್ಥರ ಆಯ್ಕೆಗೆ ಐಎಇಎ ವಿಫಲ