1994ರಲ್ಲಿ ಹಮಾಸ್ ಉಗ್ರರಿಂದ ಅಪಹರಣಕ್ಕೊಳಗಾಗಿ ಹತ್ಯೆಯಾದ ಇಸ್ರೇಲಿ ಸೈನಿಕ ನಾಕ್‌ಶಾನ್ ವಾಚ್ಸ್‌ಮ್ಯಾನ್‌ಗೆ 25 ದಶಲಕ್ಷ ಡಾಲರ್ ಹಣವನ್ನು ಬಡ್ಡಿಯ ಜತೆಗೆ ಸೇರಿಸಿ ಕೊಡುವಂತೆ ಅಮೆರಿಕದ ನ್ಯಾಯಾಧೀಶರೊಬ್ಬರು ಶುಕ್ರವಾರ ಇರಾನ್‌ಗೆ ಆದೇಶ ನೀಡಿದ್ದಾರೆ.
ವಾಚ್ಸ್‌ಮ್ಯಾನ್ 19 ವರ್ಷ ವಯಸ್ಸಿನ ಅಮೆರಿಕದ ಪೌರ ಮತ್ತು ಇಸ್ರೇಲಿ ರಕ್ಷಣಾ ಪಡೆಯಲ್ಲಿ ಸೇನಾಧಿಕಾರಿಯಾಗಿದ್ದ ಅವನನ್ನು ಹಮಾಸ್ ಭಯೋತ್ಪಾದಕರು ಅಪಹರಿಸಿದ್ದರು.
ಆ ಸಂದರ್ಭದಲ್ಲಿ ಅವನ ಅಪಹರಣದಿಂದ ಇಸ್ರೇಲಿ-ಪ್ಯಾಲೆಸ್ಟೀನಿಯ ಶಾಂತಿ ಮಾತುಕತೆಗೆ ಧಕ್ಕೆಯಾಗಿತ್ತಲ್ಲದೇ, ತನಗೆ ಜೀವದಾನ ನೀಡುವಂತೆ ವಿಡಿಯೋಟೇಪ್‌ನಲ್ಲಿ ಅಲವತ್ತುಕೊಂಡಿದ್ದ. ಆದರೆ ಹಮಾಸ್ ಉಗ್ರರು ಬಳಿಕ ಅವನ ಹತ್ಯೆ ಮಾಡಿದ್ದರು. ವಾಚ್ಸ್‌ಮನ್ ತಾಯಿ ಮತ್ತು 6 ಸೋದರರು ಇರಾನ್ ಮಾಹಿತಿ ಸಚಿವಾಲಯದ ವಿರುದ್ಧ 2006ರಲ್ಲಿ ದಾವೆ ಹೂಡಿ, ಹಮಾಸ್‌ಗೆ ತರಬೇತಿ ಮತ್ತು ಕುಮ್ಮಕ್ಕು ನೀಡಿದ್ದರಿಂದ ಟೆಹ್ರಾನ್ ವಾಚ್ಸ್‌ಮನ್ ಸಾವಿಗೆ ಕಾರಣವೆಂದು ಆರೋಪಿಸಿತ್ತು.
ಆದರೆ ದಾವೆಗೆ ಮಣಿಯಲು ನಿರಾಕರಿಸಿದ ಇರಾನ್, ವಾಚ್‌ಮ್ಯಾನ್ ಕುಟುಂಬದ ವಿರುದ್ಧ ಏಕಪಕ್ಷೀಯ ತೀರ್ಪು ನೀಡಿತು. ಅಮೆರಿಕದ ಜಿಲ್ಲಾ ನ್ಯಾಯಾಧೀಶ ರಿಕಾರ್ಡೊ ಅರ್ಬಿನಾ ಅವರು ವಾಚ್ಸ್‌ಮನ್ ತಾಯಿಗೆ 5 ಮಿಲಿಯ ಮತ್ತು ಪ್ರತಿಯೊಬ್ಬ ಸೋದರನಿಗೆ 2.5 ಮಿಲಿಯ ಡಾಲರ್ ಮಾನಸಿಕ ವೇದನೆ ಉಂಟುಮಾಡಿದ್ದಕ್ಕಾಗಿ ನೀಡುವಂತೆ, ವಾಚ್ಸ್‌ಮನ್ ಸಂಪಾದನೆ ನಷ್ಟದಿಂದ ಮತ್ತು 6 ದಿನಗಳವರೆಗೆ ಅವನು ಅನುಭವಿಸಿದ ನೋವು, ಸಂಕಷ್ಟಗಳ ಹಿನ್ನೆಲೆಯಲ್ಲಿ ವಾಚ್ಸ್‌ಮನ್ ಎಸ್ಟೇಟಿಗೆ 5 ಮಿಲಿಯವನ್ನು ನೀಡುವಂತೆ ಆದೇಶಿಸಿದೆ.
|