ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ನ್ಯೂಜಿಲೆಂಡ್‌: 23ವರ್ಷದ ಬಳಿಕ ಪತ್ನಿ, ಪುತ್ರನ ದರ್ಶನ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯೂಜಿಲೆಂಡ್‌: 23ವರ್ಷದ ಬಳಿಕ ಪತ್ನಿ, ಪುತ್ರನ ದರ್ಶನ!
ಕಳೆದ 23 ವರ್ಷಗಳಿಂದ ತನ್ನ ಪತ್ನಿ ಮತ್ತು ಪುತ್ರರಿಂದ ದೂರವಾಗಿ ನ್ಯೂಜಿಲೆಂಡ್‌ನಲ್ಲಿ ಅಕ್ರಮ ವಲಸೆಗಾರನಾಗಿದ್ದ ಭಾರತೀಯನೊಬ್ಬನಿಗೆ ಕೊನೆಗೂ ಕಾಯಂ ವಾಸಕ್ಕೆ ಅನುಮತಿ ಸಿಕ್ಕಿದ್ದರಿಂದ ಪತ್ನಿ, ಪುತ್ರನೊಂದಿಗೆ ಪುನರ್ಮಿಲನದ ಭಾಗ್ಯ ಸಿಕ್ಕಿದೆಯೆಂದು ಸುದ್ದಿಪತ್ರಿಕೆ ಶನಿವಾರ ವರದಿ ಮಾಡಿದೆ.

ಅವರನ್ನು ಕಾಣದೇ ತನ್ನ ಜೀವನ ಅಂತ್ಯಗೊಳ್ಳುವುದೆಂದು ಭಾವಿಸಿದ್ದೆ' ಎಂದು ಪತ್ನಿ ಅಮೀನಾ ಮತ್ತು 24 ವರ್ಷದ ಪುತ್ರ ಸಲ್ಮಾನ್ ಶುಕ್ರವಾರ ಆಕ್‌ಲ್ಯಾಂಡ್ ವಿಮಾನನಿಲ್ದಾಣಕ್ಕೆ ತೆರಳುತ್ತಿದ್ದಂತೆ 58ರ ಪ್ರಾಯದ ಅಬ್ದುಲ್ ಜಲೀಲ್ ಪಟೇಲ್ ನ್ಯೂಜಿಲೆಂಡ್ ಹೆರಾಲ್ಡ್ ಪತ್ರಿಕೆಗೆ ತಿಳಿಸಿದರು.

ಜಲೀಲ್ 1986ರಲ್ಲಿ ನ್ಯೂಜಿಲೆಂಡ್‌ಗೆ ವಲಸೆ ಬಂದಿದ್ದ. ಆದರೆ ಅವರ ವಲಸೆ ಸಲಹಾರ್ಥಿ ಜಲೀಲ್ ಪಾಸ್‌ಪೋರ್ಟ್ ಕಳೆದರು ಮತ್ತು ನಿವಾಸದ ಅರ್ಜಿ ಸಲ್ಲಿಸಲು ವಿಫಲರಾಗಿದ್ದರಿಂದ ಅಕ್ರಮ ವಲಸಿಗನೆಂಬ ಪಟ್ಟ ಜಲೀಲ್‌‌ಗೆ ಅಂಟಿಕೊಂಡಿತು.

ಅನೇಕ ವಲಸೆ ಪ್ರಮಾದಗಳು ಒಂದರ ಹಿಂದೆ ಇನ್ನೊಂದು ಸಂಭವಿಸಿ, ಅಕ್ರಮವಾಗಿ ವರ್ಷಗಟ್ಟಲೆ ಕೆಲಸ ಮಾಡಿದ. ತಾವು ಕಾನೂನನ್ನು ಉಲ್ಲಂಘಿಸಿದ್ದೇನೆಂದು ತಿಳಿಯಲೇ ಇಲ್ಲ. ಬದುಕುಳಿಯಲು ಹಣ ಸಂಪಾದಿಸಬೇಕೆಂದು ತನಗೆ ಗೊತ್ತಿದ್ದಾಗಿ ಅವನು ಹೇಳಿದ್ದಾನೆ. ಹೊಸ ಕನ್ಸಲ್ಟೆಂಟ್ ಸೆಪ್ಟೆಂಬರ್‌ನಲ್ಲಿ ಕೊನೆಯ ಪ್ರಯತ್ನ ಮಾಡಿ ಕಾಯಂ ನಿವಾಸದ ಅನುಮತಿ ಪಡೆದಿದ್ದರಿಂದ ಜಲೀಲ್ ಪತ್ನಿ ಮತ್ತು ಪುತ್ರ ಇಲ್ಲಿ ವಾಸಮಾಡಲು ಅವಕಾಶ ಸಿಕ್ಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿಪಾಯಿ ದಂಗೆ ಹಿಂದೆ ಅಂತರ್ಯುದ್ಧದ ಸಂಚು: ಹಸೀನಾ
ಹತ್ಯೆ: ಇರಾನ್‌ಗೆ 25 ಮಿಲಿಯ ಪಾವತಿಗೆ ಆದೇಶ
ಆಫ್ಘಾನಿಸ್ತಾನಕ್ಕೆ ಹೆಚ್ಚುವರಿ 4000 ಅಮೆರಿಕ ಪಡೆ
ಇಂಡೊನೇಷ್ಯಾ: ಅಣೆಕಟ್ಟು ಕುಸಿತದಿಂದ 67 ಬಲಿ
ಉ.ಕೊರಿಯ ರಾಕೆಟ್ ಉಡಾವಣೆ ತಡೆಗೆ ರಷ್ಯಾ ಆಗ್ರಹ
ಅಬ್ದುಲ್ ಕಲಾಂಗೆ 'ಹೂವರ್ ಪ್ರಶಸ್ತಿ'