ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ದುಬೈ:ಪ್ರಥಮ ಮಹಿಳಾ ನ್ಯಾಯಾಧೀಶರಾಗಿ ಬೆಡ್ವಾವಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದುಬೈ:ಪ್ರಥಮ ಮಹಿಳಾ ನ್ಯಾಯಾಧೀಶರಾಗಿ ಬೆಡ್ವಾವಿ
ಇಲ್ಲಿನ ನ್ಯಾಯಾಂಗವು ಒಂದು ಹೆಜ್ಜೆ ಮುಂದೆ ಹೋಗಿದ್ದು, ಪ್ರಥಮ ಮಹಿಳಾ ನ್ಯಾಯಾಧೀಶರನ್ನು ನೇಮಿಸಿದೆ. ದುಬೈ ಕೋರ್ಟ್‌ಗಳಲ್ಲಿ ಕೆಲಸ ಮಾಡಲು ಪ್ರಥಮ ಮಹಿಳಾ ನ್ಯಾಯಾಧೀಶರಾಗಿ ಎಬ್ಟಿಸಂ ಅಲಿ ರಷೀದ್ ಅಲ್ ಬೆಡ್ವಾವಿ ಪ್ರಮಾಣ ವಚನ ಸ್ವೀಕರಿಸಿದರು.

ಶರಿಯದಲ್ಲಿ ಪದವಿ ಮತ್ತು ಯುಎಇ ವಿವಿಯ ಕಾನೂನು ಪದವಿ ಪಡೆದಿರುವ 27 ವರ್ಷ ವಯಸ್ಸಿನ ಅಲ್ ಬೆಡ್ವಾವಿ, ನಾಲ್ವರು ನ್ಯಾಯಾಧೀಶರ ಜತೆ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.

ಯುಎಇಯ ಪ್ರಧಾನಮಂತ್ರಿ ಮತ್ತು ದುಬೈ ಆಡಳಿತಗಾರ ಶೇಖ್ ಮೊಹಮದ್ ಬಿನ್ ರಷೀದ್ ದುಬೈ ಕೋರ್ಟ್‌ನಲ್ಲಿ ಪ್ರಥಮ ನ್ಯಾಯಾಧೀಶೆಯಾಗಿ ಇಬ್ಟಿಸಮ್ ಬಡ್‌ವಾವಿಯನ್ನು ಸ್ವಾಗತಿಸಿದ್ದು, ಅವರ ಸದೃಢ ವೃತ್ತಿಜೀವನದ ಆಯ್ಕೆಯನ್ನು ಶ್ಲಾಘಿಸಿದ್ದಾರೆ. ಈ ಹೆಜ್ಜೆಯಿಂದ ಮಹಿಳಾ ಪದವೀಧರರು ನ್ಯಾಯಾಂಗ ಸೇರಲು ದಾರಿ ಸುಗಮವಾಗುತ್ತದೆಂದು ಅವರು ಹೇಳಿದ್ದಾರೆ.

ನೂತನ ನ್ಯಾಯಾಧೀಶರನ್ನು ಅಭಿನಂದಿಸಿದ ಅವರು, ಯಾವುದೇ ಭಯ ಅಥವಾ ಕೃಪೆಯಿಲ್ಲದೇ ನ್ಯಾಯ ಮತ್ತು ತಟಸ್ಥ ಧೋರಣೆಗೆ ಕಠಿಣವಾಗಿ ಅಂಟಿಕೊಂಡು ಜವಾಬ್ದಾರಿ ನಿರ್ವಹಿಸಲು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದುಬೈ, ಬೆಡ್ವಾವಿ, ಯುಎಇ, ಇಬ್ಟಿಸಮ್
ಮತ್ತಷ್ಟು
ನ್ಯೂಜಿಲೆಂಡ್‌: 23ವರ್ಷದ ಬಳಿಕ ಪತ್ನಿ, ಪುತ್ರನ ದರ್ಶನ!
ಸಿಪಾಯಿ ದಂಗೆ ಹಿಂದೆ ಅಂತರ್ಯುದ್ಧದ ಸಂಚು: ಹಸೀನಾ
ಹತ್ಯೆ: ಇರಾನ್‌ಗೆ 25 ಮಿಲಿಯ ಪಾವತಿಗೆ ಆದೇಶ
ಆಫ್ಘಾನಿಸ್ತಾನಕ್ಕೆ ಹೆಚ್ಚುವರಿ 4000 ಅಮೆರಿಕ ಪಡೆ
ಇಂಡೊನೇಷ್ಯಾ: ಅಣೆಕಟ್ಟು ಕುಸಿತದಿಂದ 67 ಬಲಿ
ಉ.ಕೊರಿಯ ರಾಕೆಟ್ ಉಡಾವಣೆ ತಡೆಗೆ ರಷ್ಯಾ ಆಗ್ರಹ