ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭೂತಾಪಮಾನದ ವಿರುದ್ಧ ಪ್ರತಿಭಟನೆ: ಒಂದು ಗಂಟೆ 'ಸ್ವಿಚ್‌ಆಫ್'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭೂತಾಪಮಾನದ ವಿರುದ್ಧ ಪ್ರತಿಭಟನೆ: ಒಂದು ಗಂಟೆ 'ಸ್ವಿಚ್‌ಆಫ್'
ವಿಶ್ವಾದ್ಯಂತ ಲಕ್ಷಾಂತರ ಜನರು ಶನಿವಾರ ರಾತ್ರಿ ಸುಮಾರು ಒಂದು ಗಂಟೆ ಕತ್ತಲಲ್ಲಿ ಮುಳುಗಲಿದ್ದಾರೆ. ಹವಾಮಾನ ಬದಲಾವಣೆಗೆ ಪ್ರತಿಭಟನೆ ಸೂಚಿಸುವ ಸಲುವಾಗಿ 'ಭೂ ಗಂಟೆ' ಆಚರಣೆಯಾಗಲಿದ್ದು, ಒಂದು ಗಂಟೆ ಕಾಲ ಜನರು ಕತ್ತಲೆಯ ಗರ್ಭಕ್ಕೆ ಸೇರಿಹೋಗಲಿದ್ದಾರೆ.

ಸುಮಾರು ಎರಡು ವರ್ಷಗಳ ಕೆಳಗೆ ಹಸಿರು ಪ್ರಚಾರಕರಿಂದ ಇಂಧನ ಬಳಕೆಯನ್ನು ಕಡಿತ ಮಾಡುವ ಉದ್ದೇಶದಿಂದ ಸಿಡ್ನಿಯಲ್ಲಿ 2 ವರ್ಷಗಳ ಹಿಂದೆ ಭೂಗಂಟೆ ಉಪಕ್ರಮನ್ನು ಆರಂಭಿಸಲಾಗಿತ್ತು.

ಈ ವರ್ಷಾಂತ್ಯದಲ್ಲಿ ನೂತನ ಹವಾಮಾನ ಒಪ್ಪಂದಕ್ಕೆ ಅಂಕಿತ ಹಾಕಲು ಸಾರ್ವಜನಿಕರ ಬೃಹತ್ ಅಲೆಯ ಒತ್ತಡವನ್ನು ಸೃಷ್ಟಿಸಿ ಕಫೆನ್‌ಹೆಗಾನ್‌ನಲ್ಲಿ ವರ್ಷಾಂತ್ಯದ ಸಭೆ ಮೇಲೆ ಪ್ರಭಾವ ಬೀರುವುದು ಇದರ ಗುರಿಯಾಗಿದೆ.ಜಗತ್ತಿನಾದ್ಯಂತ 88 ರಾಷ್ಟ್ರಗಳಲ್ಲಿರುವ 3400 ಪಟ್ಟಣಗಳು ಮತ್ತು ನಗರಗಳಲ್ಲಿ ಪ್ರತೀ ಸ್ಥಳೀಯ ಕಾಲಮಾನ ವಲಯದಲ್ಲಿ ರಾತ್ರಿ 8.30ಕ್ಕೆ ವಿದ್ಯುತ್ ದೀಪಗಳು ಸ್ವಿಚ್ ಆಫ್ ಆದ ಕೂಡಲೇ ಪೂರ್ಣ ಕತ್ತಲು ಆವರಿಸಲಿದೆ.

ಭೂಗಂಟೆಯನ್ನು 2007ರಲ್ಲಿ ಸಿಡ್ನಿ, ಆಸ್ಟ್ರೇಲಿಯದಲ್ಲಿ ಏಕೈಕ ವಿದ್ಯಮಾನವಾಗಿ ಆಚರಿಸಲಾಯಿತು ಮತ್ತು ಸುಮಾರು 20 ಲಕ್ಷ ಜನರು ಪಾಲ್ಗೊಂಡರು. ಕಳೆದ ವರ್ಷದ ಈವೆಂಟ್‌ನಲ್ಲಿ 370 ನಗರಗಳು ಪಾಲ್ಗೊಂಡಿದ್ದವು.

ಈ ಬಾರಿ ಸ್ವಿಚ್ ಆಫ್ ಆಗುವ ಪ್ರಥಮ ರಾಷ್ಟ್ರ ಸಿಡ್ನಿ. ವಿಶ್ವಸಂಸ್ಥೆ ಪ್ರಧಾನಕಾರ್ಯದರ್ಶಿ ಬಾನ್ ಕಿ ಮ‌ೂನ್ ಈವೆಂಟ್ ಯು ಟ್ಯೂಬ್ ಚಾನೆಲ್‌ನಲ್ಲಿನ ವಿಡಿಯೊನಲ್ಲಿ ಈ ಉಪಕ್ರಮವನ್ನು ಬೆಂಬಲಿಸಿದ್ದಾರೆ. ಹವಾಮಾನ ಬದಲಾವಣೆ ಕುರಿತು ಕ್ರಮ ಕೈಗೊಳ್ಳುವಂತೆ ಸ್ಪಷ್ಟ ಸಂದೇಶ ಕಳಿಸಲು ಜಗತ್ತಿನ ಜನತೆಗೆ 'ಭೂಗಂಟೆ' ಒಂದು ಮಾರ್ಗ ಎಂದು ಅವರು ವಿಶ್ಲೇಷಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದುಬೈ:ಪ್ರಥಮ ಮಹಿಳಾ ನ್ಯಾಯಾಧೀಶರಾಗಿ ಬೆಡ್ವಾವಿ
ನ್ಯೂಜಿಲೆಂಡ್‌: 23ವರ್ಷದ ಬಳಿಕ ಪತ್ನಿ, ಪುತ್ರನ ದರ್ಶನ!
ಸಿಪಾಯಿ ದಂಗೆ ಹಿಂದೆ ಅಂತರ್ಯುದ್ಧದ ಸಂಚು: ಹಸೀನಾ
ಹತ್ಯೆ: ಇರಾನ್‌ಗೆ 25 ಮಿಲಿಯ ಪಾವತಿಗೆ ಆದೇಶ
ಆಫ್ಘಾನಿಸ್ತಾನಕ್ಕೆ ಹೆಚ್ಚುವರಿ 4000 ಅಮೆರಿಕ ಪಡೆ
ಇಂಡೊನೇಷ್ಯಾ: ಅಣೆಕಟ್ಟು ಕುಸಿತದಿಂದ 67 ಬಲಿ