ಕಾಶ್ಮಿರ ಸಮಸ್ಯೆ ಕುರಿತು ಮಧ್ಯಸ್ಥಿಕೆ ವಹಿಸುವುದನ್ನು ತಳ್ಳಿಹಾಕಿರುವ ಅಮೆರಿಕ, ಭಾರತ ಮತ್ತು ಪಾಕಿಸ್ತಾನ ನಡುವಿನ ಪರಸ್ಪರ ವಿಶ್ವಾಸವೃದ್ಧಿಸಲು ಸಹಾಯ ಮಾಡುವುದಾಗಿ ಹೇಳಿಕೆ ನೀಡಿದೆ.
ಕಾಶ್ಮಿರ ಸಮಸ್ಯೆ ಪ್ರತ್ಯೇಕವಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಮ್ಸ್ ಜೊನ್ಸ್ ವಿದೇಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಾಶ್ಮಿರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದು ನಮಗೆ ಅಗತ್ಯವಿಲ್ಲ. ಆದರೆ ಉಭಯ ದೇಶಗಳ ಉದ್ರಿಕ್ತತೆಯನ್ನು ಕಡಿಮೆ ಮಾಡಿ ಪರಸ್ಪರ ವಿಶ್ವಾಸವೃದ್ಧಿಗೆ ಸಹಕರಿಸಲು ಅಮೆರಿಕ ಬದ್ಧವಾಗಿದೆ ಎಂದು ಜೊನ್ಸ್ ಸ್ಪಷ್ಟಪಡಿಸಿದ್ದಾರೆ.
ಉಭಯ ದೇಶಗಳ ನಡುವಣ ಹೆಚ್ಚುತ್ತಿರುವ ಅಪನಂಬಿಕೆ ಹಾಗೂ ವೈಷಮ್ಯದ ವಾತಾವರಣವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಗಂಭೀರವಾಗಿ ಚಿಂತಿಸುತ್ತಿದೆ ಎಂದು ಜೊನ್ಸ್ ಹೇಳಿದ್ದಾರೆ.
|