ಮುಂಬೈನಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪಾಕ್ ಮೇಲೆ ವಾಯುದಾಳಿ ನಡೆಸಲು ಭಾರತ ಪ್ರಯತ್ನಿಸಿದಲ್ಲಿ ಸೂಕ್ತ ಉತ್ತರ ನೀಡಲಾಗುವುದು ಎಂದು ಪಾಕಿಸ್ತಾನದ ನೂತನ ವಾಯುಸೇನೆ ಮುಖ್ಯಸ್ಥ ಖಮರ್ ಸುಲೇಮಾನ್ ಹೇಳಿದ್ದಾರೆ.
ಕಳೆದ ವಾರ ವಾಯುಸೇನೆಯ ನೂತನ ಮುಖ್ಯಸ್ಥರಾಗಿ ಸುಲೇಮಾನ್ ಅಧಿಕಾರ ಸ್ವೀಕರಿಸಿದ್ದು, ಭಾರತದ ಸಾಂಭವ್ಯ ವಾಯುದಾಳಿಗೆ ಪಾಕ್ ಮರುದಾಳಿಯನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಗಡಿನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ ಭಾರತ ವಾಯುದಾಳಿಗೆ ಪ್ರಯತ್ನಿಸಿದಲ್ಲಿ, ಕೇವಲ ನಾಲ್ಕರಿಂದ ಐದು ಗಂಟೆಗಳಲ್ಲಿ ಮರುದಾಳಿ ನಡೆಸುವ ಮಟ್ಟಿಗೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಪಾಕಿಸ್ತಾನ ವಾಯುದಳ ಸೇಲೆಮಾನ್ ಹೇಳಿಕೆಯನ್ನು ಪ್ರಕಟಿಸಿದೆ.
ಪಂಜಾಬ್ ಪ್ರಾಂತ್ಯದ ಸರ್ಗೊದಾ ವಾಯುನೆಲೆಯಲ್ಲಿ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ಸುಲೇಮಾನ್ ಒಂದು ವೇಳೆ ಯುದ್ಧ ನಡೆದಲ್ಲಿ ವಾಯುಸೇನೆ ಮಹತ್ತರ ಪಾತ್ರವಹಿಸಲಿದೆ ಎಂದು ನುಡಿದರು.
|