ದಕ್ಷಿಣ ಅಫಘಾನಿಸ್ತಾನ್ ಪ್ರದೇಶದಲ್ಲಿ ಅಫಘಾನಿಸ್ತಾನ ಹಾಗೂ ನ್ಯಾಟೋ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 12 ಉಗ್ರರು ಹತರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಹೆಲ್ಮೆಂಡ್ ಪ್ರಾಂತ್ಯದ ನಹರ್ ಸುರ್ಕ್ ಜಿಲ್ಲೆಯಲ್ಲಿ ಉಗ್ರರ ಅಡಗಿರುವ ಮಾಹಿತಿ ಪಡೆದ ನ್ಯಾಟೋ ಪಡೆಗಳು ಅಫಘಾನಿಸ್ತಾನ್ ಸೇನೆಪಡೆಗಳ ನೆರವಿನೊಂದಿಗೆ ದಾಳಿ ನಡೆಸಲಾಯಿತು ಎಂದು ಸೇನಾ ವಕ್ತಾರರು ಹೇಳಿದ್ದಾರೆ.
ಉಗ್ರರ ವಿರುದ್ಧ ದಾಳಿ ನಡೆದ ಸಂದರ್ಭದಲ್ಲಿ ಮಕ್ಕಳು ಮತ್ತು ಮಹಿಳೆಯರನ್ನು ಮುಂದೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಸೇನಾಪಡೆಗಳು ಗುಂಡಿಕ್ಕಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಘರ್ಷಣೆಯಲ್ಲಿ ಒಬ್ಬ ಬಾಲಕನಿಗೆ ಅಲ್ಪ ಪ್ರಮಾಣದ ಗಾಯಗಳಾಗಿದ್ದು, ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ ಎಂದು ನ್ಯಾಟೋ ಪಡೆಗಳ ವಕ್ತಾರರು ಹೇಳಿದ್ದಾರೆ.
|