ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 3ನೇ ಬಾರಿ ಪ್ರಧಾನಿ ಗದ್ದುಗೆ ಏರಲು ಷರೀಫ್ ಇಚ್ಚೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
3ನೇ ಬಾರಿ ಪ್ರಧಾನಿ ಗದ್ದುಗೆ ಏರಲು ಷರೀಫ್ ಇಚ್ಚೆ
ಪಾಕಿಸ್ತಾನದ ಅಧ್ಯಕ್ಷ ಜರ್ದಾರಿ ವಿರುದ್ಧ ಪ್ರತಿಭಟನೆ ನೇತೃತ್ವ ವಹಿಸಿದ್ದ ಪಾಕಿಸ್ತಾನದ ಪ್ರತಿಪಕ್ಷದ ನಾಯಕ ನವಾಜ್ ಷರೀಫ್, ಪ್ರಸಕ್ತ ಸರ್ಕಾರ ತನ್ನ ಅಧಿಕಾರಾವಧಿಯನ್ನು ಮುಗಿಸಿದ ಬಳಿಕ ಮ‌ೂರನೇ ಅವಧಿಗೆ ಪ್ರಧಾನಮಂತ್ರಿಯಾಗಿ ಸೇವೆಸಲ್ಲಿಸಲು ಬಯಸಿದ್ದಾರೆ.

ಪಾಕಿಸ್ತಾನದಲ್ಲಿ ಇತ್ತೀಚಿನ ರಾಜಕೀಯ ಅರಾಜಕತೆ ಬಳಿಕ ಪ್ರಭಾವಿ ರಾಜಕಾರಣಿಯಾಗಿ ಹೊರಹೊಮ್ಮಿರುವ ಷರೀಫ್, ಪ್ರಧಾನಮಂತ್ರಿ ಹುದ್ದೆಯನ್ನು ಎರಡು ಅವಧಿಗಳಿಗೆ ಸೀಮಿತಗೊಳಿಸಿದ ಸಂವಿಧಾನಿಕ ನಿಯಮದಲ್ಲಿ ಬದಲಾವಣೆ ಬಯಸಿದ್ದಾರೆಂದು ಮಾಧ್ಯಮ ವರದಿ ಮಾಡಿದೆ.

ವಾಲ್ ಸ್ಟ್ರೀಟ್ ಜರ್ನಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಇನ್ನೂ ನಾಲ್ಕು ವರ್ಷಗಳು ದೂರವಿರುವ ಚುನಾವಣೆ ಬಳಿಕ ತಾವು ಪ್ರಧಾನಿಯಾಗುವ ಆಶಯವನ್ನು ವ್ಯಕ್ತಪಡಿಸಿದರು. ಆದರೆ ಅದೇ ಗಳಿಗೆಯಲ್ಲಿ ಪ್ರಧಾನಿಯಾಗಲು ತಮಗೇನೂ ಆತುರವಿಲ್ಲವೆಂದು ತಿಳಿಸಿ, ಪ್ರಸಕ್ತ ಸರ್ಕಾರ ತನ್ನ ಕಾಲಾವಧಿ ಮುಗಿಸಬೇಕೆಂದು ಬಯಸಿದ್ದಾರೆ.

ಜರ್ದಾರಿ ತಮ್ಮ ಪ್ರಮುಖ ಬೇಡಿಕೆಗಳಿಗೆ ಸಮ್ಮತಿ ಸೂಚಿಸಿದ್ದರಿಂದ ಈ ನಡುವಣ ಕಾಲದಲ್ಲಿ ಸರ್ಕಾರದ ಜತೆ ಕೆಲಸ ಮಾಡಲು ತಾವು ಪ್ರಸ್ತಾಪ ಮಂಡಿಸಿರುವುದಾಗಿ ಅವರು ಹೇಳಿದರು.

ಚೌಧರಿ ಮರುನೇಮಕಕ್ಕೆ ಒತ್ತಾಯಿಸಿದ ಪ್ರತಿಪಕ್ಷದ ಬೇಡಿಕೆಗೆ ಜರ್ದಾರಿ ಮಣಿದ ಬಳಿಕ ಷರೀಫ್ ತವರು ಪ್ರಾಂತ್ಯ ಪಂಜಾಬಿನಲ್ಲಿ ರಾಜ್ಯಪಾಲರ ಆಡಳಿತ ಅಂತ್ಯಗೊಳಿಸಲು ಜರ್ದಾರಿ ಒಪ್ಪಿಗೆಸೂಚಿಸಿದ್ದಾರೆ. ಸಾಮರಸ್ಯದ ಪ್ರಯತ್ನಗಳು ಆರಂಭವಾಗಿದ್ದು, ಸರ್ಕಾರದ ಜತೆಗೂಡಿ ಕೆಲಸಮಾಡುವ ಸಂಬಂಧ ಸ್ಥಾಪನೆಗೆ ನಾವು ಬಯಸುತ್ತೇವೆ ಎಂದು ಷರೀಫ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಾಹೋರ್ ಪೊಲೀಸ್ ಶಿಬಿರದ ಮೇಲೆ ದಾಳಿ: ಕನಿಷ್ಠ 15 ಸಾವು
ಪಾಕ್‌: 26 ಉಗ್ರರ ಹತ್ಯೆ
ಅಣೆಕಟ್ಟು ಕುಸಿತ: ಸಾವಿನ ಸಂಖ್ಯೆ 93ಕ್ಕೆ
ನ್ಯಾಟೋ ದಾಳಿಗೆ 12 ಉಗ್ರರ ಬಲಿ
ಭಾರತದ ದಾಳಿ ಎದುರಿಸಲು ಸಿದ್ದ: ಪಾಕ್
ಕಾಶ್ಮಿರ ವಿಷಯದಲ್ಲಿ ಮಧ್ಯಸ್ಥಿಕೆಯಿಲ್ಲ: ಅಮೆರಿಕ