ಪಾಕಿಸ್ತಾನದಲ್ಲಿರುವ ಉಗ್ರರ ಪ್ರಮುಖ ನೆಲೆಗಳ ಮೇಲೆ ದಾಳಿಗಳಿಗೆ ಆದೇಶ ನೀಡಲು ತಮ್ಮ ಆಡಳಿತ ಸಿದ್ಧವಿರುವುದಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಪ್ರತಿಪಾದಿಸಿದ್ದಾರೆ.
ಅತ್ಯಂತ ಮುಖ್ಯ ಭಯೋತ್ಪಾದನೆ ನೆಲೆಗಳು ನಮ್ಮ ದೃಷ್ಟಿಗೆ ಬಿದ್ದರೆ, ಪಾಕಿಸ್ತಾನದ ಜತೆ ಸಮಾಲೋಚಿಸಿದ ಬಳಿಕ ಅವುಗಳ ಬೆನ್ನುಹತ್ತುವುದಾಗಿ ಸಿಬಿಎಸ್‌ನ 'ಫೇಸ್ ದಿ ನೇಷನ್' ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಹೇಳಿದರು. ಆಫ್ಘನ್-ಪಾಕಿಸ್ತಾನದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಬಿಡುಗಡೆ ಮಾಡಿದ ಕಾರ್ಯತಂತ್ರ ಕುರಿತು ಒಬಾಮಾ ವಿವರಣೆ ಪಡೆಯಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
'ಅಮೆರಿಕವು ಪಾಕಿಸ್ತಾನದ ಸಾರ್ವಬೌಮತೆಯನ್ನು ಗೌರವಿಸುತ್ತದೆ ಮತ್ತು ಆ ದಾಳಿಗಳು ಅಮೆರಿಕದ ಭೂಸೇನೆಯಿಂದ ನಡೆಯುವುದಿಲ್ಲ. ತಾವು ಸತತ ವೈಮಾನಿಕ ದಾಳಿಗಳನ್ನು ಉಲ್ಲೇಖಿಸಿದ್ದಾಗಿ'ಒಬಾಮಾ ನುಡಿದರು.
ಅಮೆರಿಕಕ್ಕೆ ಅಲ್ ಖಾಯಿದಾ ಬೆದರಿಕೆಯಲ್ಲವೆಂದು ಅನಿಸಿಕೆ ಉಂಟಾಗುವ ತನಕ ತಮ್ಮ ಆಡಳಿತವು ಅಲ್ ಖಾಯಿದಾ ದುರ್ಬಲತೆಗೆ ಅಥವಾ ನಾಶಕ್ಕೆ ದೃಢಸಂಕಲ್ಪ ಹೊಂದಿದೆ ಎಂದು ಒಬಾಮಾ ಹೇಳಿದರು. ಅಗತ್ಯಬಿದ್ದಾಗಲೆಲ್ಲ ಪಾಕಿಸ್ತಾನ ಮತ್ತು ಆಪ್ಘಾನಿಸ್ತಾನದ ಕಾರ್ಯತಂತ್ರದ ಸತತ ಹೊಂದಾಣಿಕೆಗೆ ಕೂಡ ತಮ್ಮ ಆಡಳಿತವು ಸಿದ್ಧವಾಗಿದೆಯೆಂದು ಅವರು ಪ್ರತಿಪಾದಿಸಿದರು. |