ಹಾಲಿವುಡ್ ಚಿತ್ರಗಳಲ್ಲಿ ಸಂಗೀತಕ್ಕೆ ಮನೆಮಾತಾದ ಫ್ರೆಂಚ್ ಚಲನಚಿತ್ರ ಸಂಗೀತ ಸಂಯೋಜಕ ಮಾರಿಸ್ ಜಾರೆ,ಕ್ಯಾನ್ಸರ್ ರೋಗದಿಂದ ನರಳಿದ ಬಳಿಕ ತಮ್ಮ 84ರ ಇಳಿವಯಸ್ಸಿನಲ್ಲಿ ಅಸುನೀಗಿದ್ದಾರೆ.
ಸಂಗೀತ ಸಂಯೋಜಕ ಜೀನ್ ಮೈಕೆಲ್ ಜಾರೆಯ ತಂದೆ ಮಾರಿಸ್ ಜಾರೆ, ಇಳಿವಯಸ್ಸಿನಲ್ಲಿ ಸುಪ್ರಸಿದ್ಧಿ ಪಡೆದರು. 1962ರಲ್ಲಿ ಲಾರೆನ್ಸ್ ಆಫ್ ಅರೇಬಿಯ ಚಿತ್ರಕ್ಕೆನೀಡಿದ ಸಂಗೀತ ಸಂಯೋಜನೆ ಮೂಲಕ ಬೆಳಕಿಗೆ ಬಂದ ಅವರು ಆಸ್ಕರ್ ಪುರಸ್ಕಾರಕ್ಕೆ ಪಾತ್ರರಾದರು.
ಡಾಕ್ಟ್ ಜಿವಾಗೊ ಮತ್ತು ಎ ಪ್ಯಾಸೇಜ್ ಟು ಇಂಡಿಯ ಚಿತ್ರಗಳ ಸಂಗೀತ ಸಂಯೋಜನೆಗೆ ಕೂಡ ಅವರು ಆಸ್ಕರ್ ಪ್ರಶಸ್ತಿ ಗಳಿಸಿದ್ದು, ಸುಮಾರು 150ಕ್ಕೆ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಟಕಗಳಿಗೆ, ಬ್ಯಾಲೆಟ್ ಮತ್ತು ಟೆಲಿವಿಷನ್‌ಗಳಿಗೆ ಹಾಗೂ ಜೀಸಸ್ ಆಫ್ ನಜಾರತ್ ಮಿನಿ ಸೀರೀಸ್‌ಗಳಿಗೆ ಸಿಂಫೋನಿಕ್ ಸಂಗೀತ ಕೂಡ ಅವರು ಬರೆದಿದ್ದಾರೆ.
1960ರಲ್ಲಿ ಅಮೆರಿಕದಲ್ಲಿ ವಾಸ್ತವ್ಯ ಹೂಡಿದ ಜಾರೆ, ನಾಲ್ಕು ಬಾರಿ ವಿವಾಹವಾಗಿದ್ದು, ಎಲೆಕ್ಟ್ರಾನಿಕ್ ಸಂಗೀತದ ಆದ್ಯಪ್ರವರ್ತಕ ಜೀನ್ ಮೈಕೆಲ್ ಜಾರೆಗೆ ತಂದೆಯಾಗಿದ್ದಾರೆ.ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ಅಂತಿಮ ಸಾರ್ವಜನಿಕ ದರ್ಶನ ನೀಡಿದ ಅವರು ಜೀವಮಾನ ಸಾಧನೆ ಪ್ರಶಸ್ತಿಗೆ ಪಾತ್ರರಾಗಿದ್ದರು.
ಆ ಸಂದರ್ಭದಲ್ಲಿ ಚಲನಚಿತ್ರೋತ್ಸವ ನಿರ್ದೇಶಕ ಡೈಟರ್ ಕೋಸ್ಲಿಕ್ ಜಾರೆಗೆ ಗೌರವ ಸಲ್ಲಿಸುತ್ತಾ, ಚಲನಚಿತ್ರ ಸಂಯೋಜಕರು ಸಾಮಾನ್ಯವಾಗಿ ಮಹಾನ್ ನಿರ್ದೇಶಕರು ಮತ್ತು ನಟರ ನೆರಳಿನಲ್ಲಿ ಇರುತ್ತಾರೆ. ಆದರೆ ಮಾರಿಸ್ ಜಾರೆ ವಿಷಯದಲ್ಲಿ ಭಿನ್ನವಾಗಿದ್ದಾರೆ. ಡಾಕ್ಟರ್ ಜಿವಾಗೊಗೆ ಅವರ ಸಂಗೀತವು ವಿಶ್ವವಿಖ್ಯಾತವಾಗಿದ್ದು, ಸಿನಿಮಾ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆಯೆಂದು ಹೇಳಿದ್ದಾರೆ. |