ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ತಾಂಜಾನಿಯ ರೈಲು ಅಪಘಾತದಲ್ಲಿ 15 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಂಜಾನಿಯ ರೈಲು ಅಪಘಾತದಲ್ಲಿ 15 ಸಾವು
ಪ್ರಯಾಣಿಕರ ರೈಲೊಂದು ನಿಂತಿದ್ದ ಸರಕುಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದ್ದರಿಂದ ಕನಿಷ್ಠ 15 ಜನರು ಸತ್ತಿರುವ ಘಟನೆ ತಾಂಜಾನಿಯದಲ್ಲಿ ಸಂಭವಿಸಿದೆ.

ಮಧ್ಯ ತಾಂಜಾನಿಯದ ದೊಡೊಮಾ ಪ್ರದೇಶದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಅವಶೇಷಗಳಲ್ಲಿ ಇನ್ನಿತರ ದುರ್ದೈವಿಗಳ ದೇಹಗಳು ಸಿಕ್ಕಿಬಿದ್ದಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ. ಸತ್ತವರ ಸಂಖ್ಯೆ ಇನ್ನೂ ಏರಬಹುದೆಂದು ದೊಡೊಮಾದ ಪ್ರಾದೇಶಿಕ ಆಯುಕ್ತ ವಿಲಿಯಂ ಲುಕುವಿ ಹೇಳಿದ್ದಾರೆ.

ಭಾನುವಾರ ಮಧ್ಯಾಹ್ನ ಸಂಭವಿಸಿದ ಡಿಕ್ಕಿಯಲ್ಲಿ ರೈಲುಗಳ ಅವಶೇಷಗಳನ್ನು ತೆರವು ಮಾಡಲು ಕ್ರೇನ್‌‍ಗಳನ್ನು ತರಿಸಲಾಗಿದೆ. ನಾವು ಅಪಘಾತದ ಕಾರಣ ಕುರಿತು ತನಿಖೆ ನಡೆಸುತ್ತಿದ್ದು, ಕನಿಷ್ಠ 15 ಜನರನ್ನು ಬಲಿಯಾಗಿದ್ದಾರೆಂದು ಅವರು ತಿಳಿಸಿದರು. 2002ರಲ್ಲಿ ತಾಂಜಾನಿಯ ಇತಿಹಾಸದಲ್ಲೇ ಭೀಕರ ರೈಲು ಅಪಘಾತ ಸಂಭವಿಸಿದ್ದು, ಸರಕು ಸಾಗಣೆ ರೈಲು ಪ್ರಯಾಣಿಕರ ರೈಲಿಗೆ ಡಿಕ್ಕಿ ಹೊಡೆದು 200ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು ಮತ್ತು ನೂರಾರು ಮಂದಿ ಗಾಯಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತಾಂಜಾನಿಯ, ರೈಲು, ಕ್ರೇನ್
ಮತ್ತಷ್ಟು
ಹಾಲಿವುಡ್ ಸಂಗೀತ ಸಂಯೋಜಕ ಮಾರಿಸ್ ಜಾರೆ ನಿಧನ
ಲಾಹೋರ್ ಕಾಳಗ ಅಂತ್ಯ: ಒತ್ತೆಯಾಳುಗಳ ಬಿಡುಗಡೆ
ಪಾಕ್‌ನ ಉಗ್ರರ ಪ್ರಮುಖ ನೆಲೆ ದಾಳಿಗೆ ಅಮೆರಿಕ ಸಿದ್ದ
ಐಎಸ್‌‌ಐ ತಾಲಿಬಾನ್ ಸಖ್ಯ ಬಿಡಬೇಕು: ಅಮೆರಿಕ ಆಗ್ರಹ
3ನೇ ಬಾರಿ ಪ್ರಧಾನಿ ಗದ್ದುಗೆ ಏರಲು ಷರೀಫ್ ಇಚ್ಚೆ
ಲಾಹೋರ್ ಪೊಲೀಸ್ ಶಿಬಿರದ ಮೇಲೆ ದಾಳಿ: 20 ಸಾವು