ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ದಾಳಿಗೆ ಬ್ರಿಟನ್-ಅಮೆರಿಕ ಖಂಡನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ದಾಳಿಗೆ ಬ್ರಿಟನ್-ಅಮೆರಿಕ ಖಂಡನೆ
ಲಾಹೋರ್‌ ಬಳಿ ಪೊಲೀಸ್ ಅಕಾಡೆಮಿ ಮೇಲೆ ಸೋಮವಾರ ನಡೆದ ಮಾರಕ ದಾಳಿಯನ್ನು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಮಿಲಿಬ್ಯಾಂಡ್ ಖಂಡಿಸಿದ್ದು, ಪಾಕಿಸ್ತಾನ ಜನತೆ ಮತ್ತು ವ್ಯಾಪಕ ಸ್ಥಿರತೆಯ ಹಿತಾಸಕ್ತಿ ದೃಷ್ಟಿಯಿಂದ ನೆರವು ನೀಡುವುದಾಗಿ ಭರವಸೆ ನೀಡಿದರು.

ಪಾಕಿಸ್ತಾನದ ಭದ್ರತೆಯನ್ನು ಕಾಪಾಡಲು ಜೀವ ಮುಡಿಪಾಗಿಟ್ಟ ಜನರ ವಿರುದ್ಧ ಭಯೋತ್ಪಾದಕ ಈ ಬಾರಿ ಇನ್ನೊಂದು ಮಾರಕ ದಾಳಿ ನಡೆದಿದ್ದು ವಿಷಾದನೀಯವಾಗಿದೆ ಎಂದು ಕಮಾಂಡೊ ಶೈಲಿಯ ಭಯೋತ್ಪಾದಕ ದಾಳಿಯ ಬಳಿಕ ಅವರು ತಿಳಿಸಿದರು.

ಹಿಂಸಾತ್ಮಕ ಉಗ್ರವಾದದಿಂದ ಪಾಕಿಸ್ತಾನ ಎದುರಿಸುತ್ತಿರುವ ಬೆದರಿಕೆಯನ್ನು ಇದು ಮತ್ತೊಮ್ಮೆ ನೆನಪಿಸುತ್ತದೆಂದು ಅವರು ಹೇಳಿದರು. ಪಾಕ್‌ನಲ್ಲಿ ದಾಳಿಯನ್ನು ಅಮೆರಿಕ ಕೂಡ ಖಂಡಿಸಿದ್ದು, ಉಗ್ರವಾದದ ವಿರುದ್ಧ ಹೋರಾಟಕ್ಕೆ ಸರ್ಕಾರ ಮತ್ತು ಜನತೆಗೆ ಒತ್ತಾಸೆಯಾಗಿ ನಿಲ್ಲುವುದಾಗಿ ತಿಳಿಸಿದೆ.

ದುರ್ದೈವಿಗಳಿಗೆ ನಾವು ತೀವ್ರ ಸಂತಾಪ ಸೂಚಿಸುತ್ತೇವೆ. ಹಿಂಸಾಚಾರಕ್ಕೆ ಯಾವುದೇ ರಾಜಕೀಯ ಸಮರ್ಥನೆಯಿಲ್ಲ. ಭಯೋತ್ಪಾದನೆ ನಿಗ್ರಹದ ಪಾಕಿಸ್ತಾನ ಪ್ರಯತ್ನಕ್ಕೆ ನಮ್ಮ ಬೆಂಬಲ ಮುಂದುವರಿಸುವುದಾಗಿ ವಿದೇಶಾಂಗ ಇಲಾಖೆ ಅಧಿಕಾರಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜಮನೆತನ ಹತ್ಯಾಕಾಂಡದ ರಹಸ್ಯ ಬಿಚ್ಚಿಟ್ಟ ಪರಾಸ್
ಅಪ್ಘಾನ್: ಆತ್ಮಾಹುತಿ ದಾಳಿಗೆ 8 ಬಲಿ
ಲಂಕಾ: 70 ಉಗ್ರರ ಬಲಿ
ಐವರಿ ಕೋಸ್ಟ್: ಕಾಲ್ತುಳಿತಕ್ಕೆ 22 ಬಲಿ
ತಾಂಜಾನಿಯ ರೈಲು ಅಪಘಾತದಲ್ಲಿ 15 ಸಾವು
ಹಾಲಿವುಡ್ ಸಂಗೀತ ಸಂಯೋಜಕ ಮಾರಿಸ್ ಜಾರೆ ನಿಧನ