ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಲಾಹೋರ್ ದಾಳಿ ನಡೆಸಿದ್ದು ನಾವೇ: ಬೈತುಲ್ಲಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾಹೋರ್ ದಾಳಿ ನಡೆಸಿದ್ದು ನಾವೇ: ಬೈತುಲ್ಲಾ
ಬೈತುಲ್ಲಾ ತಲೆಗೆ 5ಮಿ.ಡಾಲರ್ ಘೋಷಣೆ...
ಲಾಹೋರ್‌ನಲ್ಲಿ 27 ಜನರನ್ನು ಬಲಿತೆಗೆದುಕೊಂಡ ಮನಾವರ್ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಮಾರಕ ದಾಳಿಗೆ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನದ ನಾಯಕ ಬೈತುಲ್ಲಾ ಮಸೂದ್ ಹೊಣೆ ಹೊತ್ತಿದ್ದಾನೆ.

ಸ್ವಾತ್ ಕಣಿವೆಯಲ್ಲಿ ಕೇಂದ್ರೀಕೃತನಾಗಿರುವ ತಾಲಿಬಾನ್ ನಾಯಕ ಬೈತುಲ್ಲಾ ಮಸೂದ್, ಮಾಜಿ ಪ್ರಧಾನಮಂತ್ರಿ ಬೇನಜಿರ್ ಭುಟ್ಟೊ ಹತ್ಯಾಕಾಂಡದಲ್ಲಿ ಕೂಡ ಕೈವಾಡ ನಡೆಸಿದ್ದಾನೆಂದು ಶಂಕಿಸಲಾಗಿದೆ. ಇದಿಷ್ಟೇ ಅಲ್ಲದೇ ಅಮೆರಿಕದ ತಾಲಿಬಾನ್ ವಿರುದ್ಧ ಸಮರದಲ್ಲಿ ಅಮೆರಿಕ ಬೇಟೆಯಾಡುವ ಉಗ್ರರ ಹಿಟ್ ಲಿಸ್ಟಲ್ಲಿ ಮೆಹಸೂದ್ ಹೆಸರಿದ್ದು, ಅವನ ತಲೆಯನ್ನು ಒಪ್ಪಿಸುವವರಿಗೆ 5 ಮಿಲಿಯ ಡಾಲರ್ ಬಹುಮಾನವನ್ನು ಅಮೆರಿಕ ಈಗಾಗಲೇ ಘೋಷಿಸಿದೆ.

ಬೈತುಲ್ಲಾ ಮಸೂದ್ ಸಮೀಪವರ್ತಿ ಮತ್ತು ಪಿದಾಯೀನ್-ಎ-ಇಸ್ಲಾಮಿಯ ನಾಯಕ ಫಾರುಕ್ ಮೆಹಸೂದ್ ಈ ಕುರಿತು ನೀಡಿದ ಹೇಎಳಿಕೆಯಲ್ಲಿ ದಾಳಿಯ ಹೊಣೆಯನ್ನು ಹೊತ್ತಿದ್ದು, ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆ ನಿಲ್ಲದಿದ್ದರೆ ಇನ್ನಷ್ಟು ದಾಳಿಗಳನ್ನು ನಡೆಸುವುದಾಗಿ ಎಚ್ಚರಿಸಿದ್ದಾನೆ.

ತಾಲಿಬಾನ್ ನಾಯಕ ಬೈತುಲ್ಲಾ ಮಸೂದ್‌ಗೆ ನಿಷ್ಠರಾದ ಬಂಟರು ದಾಳಿಯ ಹಿಂದಿದ್ದಾರೆಂದು ಪಾಕ್ ಒಳಾಡಳಿತ ಸಚಿವ ರೆಹ್ಮಾನ್ ಮಲಿಕ್ ಸೋಮವಾರ ತಿಳಿಸಿದ್ದರು. ತಾಲಿಬಾನ್ ಹಿಂಸಾಚಾರದ ಸುಳಿಗೆ ಸಿಕ್ಕಿದ ದಕ್ಷಿಣ ವಜಿರಿಸ್ತಾನ ಪ್ರದೇಶದಲ್ಲಿ ಈ ಯೋಜನೆ ರೂಪಿಸಲಾಯಿತು ಎಂದು ಅವರು ನುಡಿದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ದಾಳಿಗೆ ಬ್ರಿಟನ್-ಅಮೆರಿಕ ಖಂಡನೆ
ರಾಜಮನೆತನ ಹತ್ಯಾಕಾಂಡದ ರಹಸ್ಯ ಬಿಚ್ಚಿಟ್ಟ ಪರಾಸ್
ಅಪ್ಘಾನ್: ಆತ್ಮಾಹುತಿ ದಾಳಿಗೆ 8 ಬಲಿ
ಲಂಕಾ: 70 ಉಗ್ರರ ಬಲಿ
ಐವರಿ ಕೋಸ್ಟ್: ಕಾಲ್ತುಳಿತಕ್ಕೆ 22 ಬಲಿ
ತಾಂಜಾನಿಯ ರೈಲು ಅಪಘಾತದಲ್ಲಿ 15 ಸಾವು