ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಶಾಬಾಜ್ ಮತ್ತೆ ಪಂಜಾಬ್ ಸಿಎಂ-ಪಾಕ್ ಸುಪ್ರೀಂ ಅಸ್ತು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಾಬಾಜ್ ಮತ್ತೆ ಪಂಜಾಬ್ ಸಿಎಂ-ಪಾಕ್ ಸುಪ್ರೀಂ ಅಸ್ತು
ನವಾಜ್ ಷರೀಫ್-ಶಾಬಾಜ್‌ಗೆ ಸುಪ್ರೀಂನಿಂದ ಗೆಲುವು...
ಪಿಎಂಎಲ್‌ಎನ್ ವರಿಷ್ಠ, ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಸಹೋದರ ಶಾಭಾಜ್ ವಿರುದ್ಧ ಈ ಹಿಂದೆ ನೀಡಿದ್ದ ಆಯ್ಕೆ ಅನರ್ಹತೆಯ ತೀರ್ಪಿಗೆ ಮಂಗಳವಾರ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದು, ಪಂಜಾಬ್ ಪ್ರಾಂತ್ಯದಲ್ಲಿ ಪಿಎಂಎಲ್-ಎನ್ ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ಶಾಭಾಜ್ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅನುವು ಮಾಡಿಕೊಟ್ಟಿದೆ.

ಅಪೆಕ್ಸ್ ಕೋರ್ಟ್‌ನ ಐದು ಮಂದಿ ಸದಸ್ಯರನ್ನೊಳಗೊಂಡ ಪೀಠದ ಮುಖ್ಯ ನ್ಯಾಯಾಧೀಶರಾದ ತಾಸಾದಕ್ ಹುಸೈನ್ ಅವರು, ಫೆಬ್ರುವರಿ 25ರಂದು, ಷರೀಫ್ ಹಾಗೂ ಶಾಭಾಜ್ ಆಯ್ಕೆ ಮತ್ತು ಚುನಾವಣೆ ಸ್ಪರ್ಧೆಯನ್ನು ಅನರ್ಹಗೊಳಿಸಿ ತೀರ್ಪು ನೀಡಿದ್ದರು. ಈ ತೀರ್ಪು ಹೊರ ಬಂದ ಬಳಿಕ ಷರೀಫ್ ಬೆಂಬಲಿಗರು ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದ್ದರು.

ಆದರೆ ಸುಪ್ರೀಂಕೋರ್ಟ್ ಈ ಮೊದಲು ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ನೀಡುವ ಮೂಲಕ, ಷರೀಫ್ ಸಹೋದರರ ಹಾದಿಯನ್ನು ಸುಗಮಗೊಳಿಸಿದೆ. ಇದೀಗ ಶಾಭಾಜ್ ಪಂಜಾಬ್ ಅಸೆಂಬ್ಲಿಯ ಸದಸ್ಯರು ಮಾತ್ರವಲ್ಲ, ಮುಖ್ಯಮಂತ್ರಿಯಾಗಿಯೂ ಮಂಗಳವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಪಿಎಂಎಲ್-ಎನ್ ಮುಖಂಡ ರಾಜಾ ಜಾಫ್ರುಲ್ಲಾ ಹಕ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ಇಂದು ನೀಡಿರುವ ತೀರ್ಪು ಐತಿಹಾಸಿಕವಾದದ್ದು, ಇದು ಪಾಕಿಸ್ತಾನಕ್ಕೆ ಸಂದ ಜಯ ಎಂದು ಬಣ್ಣಿಸಿದ ಹಕ್, ತೀರ್ಪಿನಿಂದ ನಿಜಕ್ಕೂ ತಾವು ತುಂಬಾ ಸಂತೋಷಗೊಂಡಿರುವುದಾಗಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಿಬ್ಯಾ: ದೋಣಿ ನೀರುಪಾಲು-21 ಬಲಿ
ಶ್ರೀಲಂಕಾ: ತಾತ್ಕಾಲಿಕ ಕದನವಿರಾಮ ಘೋಷಣೆ ಸಂಭವ
ದಕ್ಷಿಣ ವಜಿರಿಸ್ತಾನದಲ್ಲಿ ದಾಳಿ ಯೋಜನೆ: ಮಲಿಕ್
ಲಾಹೋರ್ ದಾಳಿ ನಡೆಸಿದ್ದು ನಾವೇ: ಬೈತುಲ್ಲಾ
ಪಾಕ್ ದಾಳಿಗೆ ಬ್ರಿಟನ್-ಅಮೆರಿಕ ಖಂಡನೆ
ರಾಜಮನೆತನ ಹತ್ಯಾಕಾಂಡದ ರಹಸ್ಯ ಬಿಚ್ಚಿಟ್ಟ ಪರಾಸ್