ಭಾರತೀಯ ಸಾಪ್ಟ್‌ವೇರ್ ಎಂಜಿನಿಯರ್ ಒಬ್ಬ ತನ್ನ ಇಬ್ಬರು ಮಕ್ಕಳ ಸಹಿತ ಮೂವರು ಸಂಬಂಧಿಕರನ್ನು ಗುಂಡಿಟ್ಟು ಕೊಂದ ನಂತರ ತಾನೂ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮೆರಿಕದ ಸಿಲಿಕಾನ್‌ವ್ಯಾಲಿಯ ಸಂತಾಕ್ಲಾರಾ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಎಂಜಿನಿಯರ್ ಹೆಂಡತಿ ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕೃತ್ಯ ನಡೆಸಿದ ವ್ಯಕ್ತಿಯ ಹೆಸರು ದೇವರಾಜನ್ ಎಂದಾಗಿದ್ದು, ತಮಿಳುನಾಡು ಮೂಲದವರು ಎನ್ನಲಾಗಿದೆ. ಕ್ಷುಲ್ಲಕ ಕಾರಣವೇ ಘಟನೆಗೆ ಕಾರಣವೆನ್ನಲಾಗಿದೆ. |