ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಮೆರಿಕದ ಮೇಲೂ ದಾಳಿ ಮಾಡ್ತೇವೆ: ಮೆಹಸೂದ್ ಎಚ್ಚರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕದ ಮೇಲೂ ದಾಳಿ ಮಾಡ್ತೇವೆ: ಮೆಹಸೂದ್ ಎಚ್ಚರಿಕೆ
ಲಾಹೋರ್‌ನಲ್ಲಿ ಪೊಲೀಸ್ ತರಬೇತಿ ಕೇಂದ್ರದ ಮೇಲಿನ ದಾಳಿಯ ಹೊಣೆ ಹೊತ್ತಿರುವ ತಾಲಿಬಾನ್ ಮುಖ್ಯಸ್ಥ ಬೈತುಲ್ಲಾ ಮೆಹ್‌ಸೂದ್, ವಾಷಿಂಗ್ಟನ್ ಮೇಲೆ ದಾಳಿ ಮಾಡುವುದಾಗಿ ಶಪಥ ತೊಟ್ಟಿದ್ದಾನೆ.

'ಪೊಲೀಸ್ ಠಾಣೆ ಮೇಲೆ ಆತ್ಮಾಹುತಿ ದಾಳಿ, ಬಾನ್ನುನಲ್ಲಿ ಆತ್ಮಾಹುತಿ ಕಾರ್ ಬಾಂಬ್ ದಾಳಿ ಮತ್ತು ಲಾಹೋರಿನಲ್ಲಿ ಪೊಲೀಸ್ ತರಬೇತಿ ಶಿಬಿರದ ಮೇಲೆ ದಾಳಿಗೆ ತಾವು ಸಂಪೂರ್ಣವಾಗಿ ಜವಾಬ್ದಾರರು. ಶೀಘ್ರದಲ್ಲೇ ನಾವು ವಾಷಿಂಗ್ಟನ್ ಮತ್ತು ಶ್ವೇತಭವನದಲ್ಲಿ ದಾಳಿ ನಡೆಸಿ ಜಗತ್ತನ್ನೇ ಚಕಿತಗೊಳಿಸುತ್ತೇವೆ. ಪಾಕಿಸ್ತಾನದಲ್ಲಿ ಅಮೆರಿಕನ್ನರ ಮೇಲೆ ನಾವು ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ.

ವಾಷಿಂಗ್ಟನ್ ಮತ್ತು ಶ್ವೇತಭವನದಲ್ಲಿ ನಾವು ಸೇಡು ತೀರಿಸಿಕೊಳ್ಳುತ್ತೇವೆ. ದೇವರು ಇಚ್ಛಿಸಿದರೆ ಅದು ವಾಸ್ತವರೂಪ ಪಡೆಯುತ್ತದೆ'ಎಂದು ಅಸೋಸಿಯೇಟೆಡ್ ಪ್ರೆಸ್‌ಗೆ ದೂರವಾಣಿ ಕರೆಯಲ್ಲಿ ಅವನು ತಿಳಿಸಿದ್ದಾನೆ. ಮೆಹಸೂದ್ ಪಾಕಿಸ್ತಾನದ ಕಾನೂನುರಹಿತ ಬುಡಕಟ್ಟು ಪ್ರದೇಶಗಳಲ್ಲಿ ನೆಲೆಹೊಂದಿದ್ದು, ದುರ್ಬಲ ಒಂದು ವರ್ಷ ಪ್ರಾಯದ, ರಾಜಕೀಯ ಅರಾಜಕತೆ ಸುಳಿಗೆ ಸಿಕ್ಕಿದ್ದ ಜರ್ದಾರಿ ಸರ್ಕಾರಕ್ಕೆ ತಾಲಿಬಾನ್ ಬೆದರಿಕೆಯು ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ.

ಆಫ್ಘಾನ್ ಮತ್ತು ಪಾಕಿಸ್ತಾನಿ ಉಗ್ರಗಾಮಿಗಳ ವಿರುದ್ಧ ಒಬಾಮಾ ಕಾರ್ಯಾಚರಣೆಗೆ ಪ್ರತೀಕಾರವಾಗಿ ಈ ಬೆದರಿಕೆಯೊಡ್ಡಲಾಗಿದೆ. ಬೇನಜೀರ್ ಭುಟ್ಟೊ ಹತ್ಯೆಗೆ ಮೆಹಸೂದ್ ಸುತ್ತ ಸಂಶಯದ ಹುತ್ತ ಆವರಿಸಿರುವ ನಡುವೆ, ಅವನು ಅಮೆರಿಕಕ್ಕೆ ಮಾತ್ರ ತಲೆನೋವಾಗಿರದೇ ಭಾರತದ ಪಡೆಗಳು ಕೂಡ ವಾಘಾ ಗಡಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿ-20 ಶೃಂಗಸಭೆಗೆ ಬೆದರಿಕೆ: ಐವರ ಬಂಧನ
ಐವರನ್ನು ಕೊಂದು ತಾನು ಆತ್ಮಹತ್ಯೆಗೈದ ಭಾರತೀಯ ಎಂಜಿನಿಯರ್
ಪಾತಕಿ ದಾವೂದ್ ಸೋದರ ನೂರಾ ಕ್ಯಾನ್ಸರ್‌ಗೆ ಬಲಿ
ಶಾಬಾಜ್ ಮತ್ತೆ ಪಂಜಾಬ್ ಸಿಎಂ-ಪಾಕ್ ಸುಪ್ರೀಂ ಅಸ್ತು
ಲಿಬ್ಯಾ: ದೋಣಿ ನೀರುಪಾಲು-21 ಬಲಿ
ಶ್ರೀಲಂಕಾ: ತಾತ್ಕಾಲಿಕ ಕದನವಿರಾಮ ಘೋಷಣೆ ಸಂಭವ