ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬ್ರಿಟನ್‌: ವಿದೇಶಿ ವಿದ್ಯಾರ್ಥಿಗಳಿಗೆ ಕಠಿಣ ಕಾಯ್ದೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ರಿಟನ್‌: ವಿದೇಶಿ ವಿದ್ಯಾರ್ಥಿಗಳಿಗೆ ಕಠಿಣ ಕಾಯ್ದೆ
ಭಾರತ ಮತ್ತು ಇತರೆ ಯ‌‌ುರೋಪೇತರ ರಾಷ್ಟ್ರಗಳಿಂದ ವಿದ್ಯಾಭ್ಯಾಸಕ್ಕೆಂದು ಬರುವ ಸಾಗರೋತ್ತರ ವಿದ್ಯಾರ್ಥಿಗಳಿಗೆ ಹೊಸ ಕಠಿಣ ನಿಯಮಗಳನ್ನು ಬ್ರಿಟನ್‌ನಲ್ಲಿ ಮಂಗಳವಾರದಿಂದ ಜಾರಿಗೆ ತರಲಾಗಿದೆ.

ನೂತನ ವ್ಯವಸ್ಥೆ ಪ್ರಕಾರ, ವಿದ್ಯಾರ್ಥಿ ವೀಸಾಗೆ ಅರ್ಜಿ ಸಲ್ಲಿಸುವವರು ಪರವಾನಗಿ ಪಡೆದ ಸಂಸ್ಥೆಯಲ್ಲಿ ಪ್ರವೇಶ ಸಿಕ್ಕಿದೆಯೆಂದು ಮತ್ತು ಆರ್ಥಿಕವಾಗಿ ಸ್ವಾವಲಂಬಿಯೆಂದು ಸಾಬೀತು ಮಾಡಬೇಕು. ಪ್ರಥಮವರ್ಷದ ಶುಲ್ಕ ಮತ್ತು 9 ತಿಂಗಳವರೆಗೆ ಜೀವನವೆಚ್ಚ ಪಾವತಿಗೆ ಸಾಕಷ್ಟು ಹಣವಿದೆಯೆಂದು ಅರ್ಜಿದಾರರು ತೋರಿಸಬೇಕು.

ಹಣವು ನಗದಿನ ರೂಪದಲ್ಲಿರಬೇಕು ಮತ್ತು ಶೇರುಗಳು, ಬಾಂಡ್, ನಿವೃತ್ತಿ ನಿಧಿಗಳು ಮತ್ತು ಉಳಿತಾಯ ಖಾತೆಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ನಿಯಮದಲ್ಲಿ ತಿಳಿಸಲಾಗಿದೆ.ತಮ್ಮ ಅವಲಂಬಿತರನ್ನು ಜತೆಗೆ ಕರೆತರಲು ಬಯಸಿದ್ದರೆ ಅವರಿಗೆ ಹೆಚ್ಚುವರಿ ಹಣವನ್ನು ಪಾವತಿ ಮಾಡಬೇಕಾಗುತ್ತದೆ.

ವಿದ್ಯಾರ್ಥಿ ವೀಸಾಗಳ ದುರ್ಬಳಕೆ ತಡೆಯುವ ಕ್ರಮವಾಗಿ ನೂತನ ನಿಯಮಗಳನ್ನು ತರಲಾಗಿದೆ ಎಂದು ಗೃಹಕಚೇರಿ ತಿಳಿಸಿದೆ. ಬ್ರಿಟನ್ ವಿವಿಗಳನ್ನು ಪ್ರತಿನಿಧಿಸುವ ಯ‌ೂನಿವರ್ಸಿಟೀಸ್ ಯುಕೆ ಈ ನಿಯಮಗಳಿಗೆ ಪ್ರತಿಭಟನೆ ಸೂಚಿಸಿದ್ದು, 'ಉಪಖಂಡ ಮತ್ತು ಆಫ್ರಿಕಾದ ವಿದ್ಯಾರ್ಥಿಗಳಿಗೆ ಇದರಿಂದ ಪೆಟ್ಟು ನೀಡಿದಂತಾಗಿದೆ. ಅವರ ಬಳಿ ಸಾಕಷ್ಟು ಉಳಿತಾಯದ ಹಣವಿರುವುದಿಲ್ಲ ಮತ್ತು ವಿದ್ಯಾಭ್ಯಾಸಕ್ಕೆ ನೆರವಾಗಲು ಅರೆಕಾಲಿಕ ಕೆಲಸಗಳನ್ನು ಮಾಡುತ್ತಾರೆಂದು' ಅದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಡೆನ್ ಪುತ್ರಿ ಕೊಕೇನ್ ಪುರಾಣ-ಶ್ವೇತಭವನದಲ್ಲಿ ಕೋಲಾಹಲ
ಇಸ್ರೇಲ್ ಪ್ರಧಾನಿಯಾಗಿ ನೆತಾನ್‌ಹ್ಯೂ ಪ್ರಮಾಣವಚನ
ಜಿ20 ಶೃಂಗಸಭೆ: ಬ್ರಿಟನ್‌ಗೆ ಒಬಾಮಾ
ಅಮೆರಿಕದ ಮೇಲೂ ದಾಳಿ ಮಾಡ್ತೇವೆ: ಮೆಹಸೂದ್ ಎಚ್ಚರಿಕೆ
ಜಿ-20 ಶೃಂಗಸಭೆಗೆ ಬೆದರಿಕೆ: ಐವರ ಬಂಧನ
ಐವರನ್ನು ಕೊಂದು ತಾನು ಆತ್ಮಹತ್ಯೆಗೈದ ಭಾರತೀಯ ಎಂಜಿನಿಯರ್