ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಮೆರಿಕದ ಡ್ರೋನ್ ದಾಳಿಗೆ ಕನಿಷ್ಠ 10 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕದ ಡ್ರೋನ್ ದಾಳಿಗೆ ಕನಿಷ್ಠ 10 ಬಲಿ
ಶಂಕಿತ ಅಮೆರಿಕದ ಡ್ರೋನ್ ವಿಮಾನದಿಂದ ಹಾರಿಸಿದ ಕ್ಷಿಪಣಿಯು ಅಪ್ಪಳಿಸಿ ಆಫ್ಘಾನಿಸ್ತಾನ ಗಡಿಗೆ ಸಮೀಪ ಕನಿಷ್ಠ 10 ಜನರು ಅಸುನೀಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಓರ್ಕಾಜಾಯ್ ಬುಡಕಟ್ಟು ಪ್ರದೇಶದಲ್ಲಿ ಕ್ಷಿಪಣಿಯು ಮನೆಯ ಮೇಲೆ ಅಪ್ಪಳಿಸಿದ್ದು, ಮನೆಯನ್ನು ತಾಲಿಬಾನ್ ಶಿಬಿರವಾಗಿ ಪರಿವರ್ತಿಸಲಾಗಿತ್ತೆಂದು ನಿವಾಸಿಗಳು ಮತ್ತು ಸ್ಥಳೀಯ ಪತ್ರಕರ್ತರು ತಿಳಿಸಿದ್ದಾರೆ.

ಕ್ಷಿಪಣಿ ದಾಳಿ ನಡೆದ ಕೂಡಲೇ ತಾಲಿಬಾನ್ ಉಗ್ರರು ಇಡೀ ಪ್ರದೇಶವನ್ನು ಸುತ್ತುವರೆದರು ಎಂದು ಅವರು ಹೇಳಿದ್ದಾರೆ. ಡ್ರೋನ್ ದಾಳಿಗಳನ್ನು ನಡೆಸುವ ಮುಂಚೆ ತಮ್ಮ ಸರ್ಕಾರವು ಪಾಕಿಸ್ತಾನದ ಜತೆ ಸಮಾಲೋಚನೆ ನಡೆಸುತ್ತದೆಂದು ಕಳೆದ ವಾರ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ತಿಳಿಸಿದ್ದರು. ಇಂತಹ ಡ್ರೋನ್ ದಾಳಿಗಳಿಗೆ ಪಾಕಿಸ್ತಾನ ಟೀಕೆ ಮಾಡಿದ್ದು, ಆಗಾಗ್ಗೆ ನಾಗರಿಕರು ಬಲಿಯಾಗುತ್ತಿದ್ದು, ಉಗ್ರಗಾಮಿಗಳಿಗೆ ಕುಮ್ಮಕ್ಕು ಸಿಗುತ್ತಿದೆಯೆಂದು ತಿಳಿಸಿದೆ.

ಅಮೆರಿಕದ ಡ್ರೋನ್ ದಾಳಿಗೆ ಪ್ರತೀಕಾರವಾಗಿ ಲಾಹೋರ್ ಪೊಲೀಸ್ ಅಕಾಡೆಮಿ ಮೇಲೆ ದಾಳಿ ನಡೆಸಲಾಗಿದೆ ಎಂದು ತಾಲಿಬಾನ್ ನಾಯಕ ಬೈತುಲ್ಲಾ ಮಸೂದ್ ಮಂಗಳವಾರ ತಿಳಿಸಿದ್ದು, ಪಾಕಿಸ್ತಾನ ಸರ್ಕಾರ ಅಮೆರಿಕಕ್ಕೆ ಒತ್ತಾಸೆ ನಿಲ್ಲಿಸುವ ತನಕ ದಾಳಿಗಳು ಮುಂದುವರಿಯುತ್ತದೆಂದು ಹೇಳಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬ್ರಿಟನ್‌: ವಿದೇಶಿ ವಿದ್ಯಾರ್ಥಿಗಳಿಗೆ ಕಠಿಣ ಕಾಯ್ದೆ
ಬಿಡೆನ್ ಪುತ್ರಿ ಕೊಕೇನ್ ಪುರಾಣ-ಶ್ವೇತಭವನದಲ್ಲಿ ಕೋಲಾಹಲ
ಇಸ್ರೇಲ್ ಪ್ರಧಾನಿಯಾಗಿ ನೆತಾನ್‌ಹ್ಯೂ ಪ್ರಮಾಣವಚನ
ಜಿ20 ಶೃಂಗಸಭೆ: ಬ್ರಿಟನ್‌ಗೆ ಒಬಾಮಾ
ಅಮೆರಿಕದ ಮೇಲೂ ದಾಳಿ ಮಾಡ್ತೇವೆ: ಮೆಹಸೂದ್ ಎಚ್ಚರಿಕೆ
ಜಿ-20 ಶೃಂಗಸಭೆಗೆ ಬೆದರಿಕೆ: ಐವರ ಬಂಧನ