ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಲಂಡನ್: ಹೆಲಿಕಾಪ್ಟರ್ ಅಪಘಾತ-16 ಜನರು ಬಲಿ ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಂಡನ್: ಹೆಲಿಕಾಪ್ಟರ್ ಅಪಘಾತ-16 ಜನರು ಬಲಿ ?
ಸಮುದ್ರ ಪ್ರದೇಶದ ತೈಲಕ್ಷೇತ್ರದಿಂದ 16 ಜನರನ್ನು ಸಾಗಿಸುತ್ತಿದ್ದ ಹೆಲಿಕಾಪ್ಟರೊಂದು ಗುರುವಾರ ಸ್ಕಾಟ್‌ಲ್ಯಾಂಡ್ ಈಶಾನ್ಯ ತೀರದಲ್ಲಿ ಅಪಘಾತಕ್ಕೀಡಾಗಿದ್ದು, ಎಲ್ಲ ಪ್ರಯಾಣಿಕರು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಬುಧವಾರ ಈ ಅಪಘಾತ ಸಂಭವಿಸಿದ್ದು, ರಕ್ಷಣಾ ತಂಡ 8 ದೇಹಗಳನ್ನು ಹೊರತೆಗೆದಿದೆ. ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ 8 ಗಂಟೆಯ ಬಳಿಕ ಶೋಧಕಾರ್ಯಚರಣೆ ಸಮಾಪ್ತಿಯಾಯಿತಾದರೂ ಇನ್ನೂ 8 ಜನರು ನಾಪತ್ತೆಯಾಗಿದ್ದಾರೆ.

ಕಣ್ಮರೆಯಾದವರು ಪುನಃ ಸಿಗುವ ಭರವಸೆ ಕುಂದಿರುವುದಾಗಿ ಸ್ಕಾಟಿಷ್ ಸಚಿವ ಅಲೆಕ್ಸ್ ಸಾಲ್ಮಂಡ್ ತಿಳಿಸಿದರು.ಬದುಕುಳಿದವರಿಗಾಗಿ ಸುಮಾರು 15 ನೌಕೆಗಳು ಜಲಪ್ರದೇಶವನ್ನು ಶೋಧಿಸಿದರೂ ವ್ಯರ್ಥವಾಗಿದ್ದರಿಂದ ಗುರುವಾರ ಮುಂಜಾನೆ ತನಕ ಶೋಧ ಸ್ಥಗಿತಗೊಳಿಸಲಾಗಿದೆ.

ಕ್ರಿಮಂಡ್ ತೀರದಿಂದ 35 ಮೈಲು ದೂರದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಬಳಿಕ ಉತ್ತರ ಸಮುದ್ರದಿಂದ 8 ದೇಹಗಳನ್ನು ಪತ್ತೆಹಚ್ಚಲಾಗಿದ್ದು, ಉಳಿದ 8 ಮಂದಿ ನಾಪತ್ತೆಯಾಗಿದ್ದಾರೆಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೆಲಿಕಾಪ್ಟರ್ ತಮ್ಮ ಕಂಪೆನಿಯ ಪರವಾಗಿ ಕೆಲಸ ಮಾಡುತ್ತಿತ್ತೆಂದು ತೈಲಕ್ಷೇತ್ರದ ದೈತ್ಯ ಬಿಪಿ ತಿಳಿಸಿದ್ದು,ಅದರಲ್ಲಿ 14 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರೆಂದು ಹೇಳಿದ್ದಾರೆ. ಹೆಲಿಕಾಪ್ಟರ್ ಮಿಲ್ಲರ್ ತೈಲಕ್ಷೇತ್ರದಿಂದ ಮುಖ್ಯನಾಡಿಗೆ ಹಿಂತಿರುಗಿ ಹಾರುವಾಗ ಸ್ಕಾಟ್ಲೆಂಡ್ ತೀರಕ್ಕೆ 270 ಕಿಮೀ ದೂರದಲ್ಲಿ ಅಪಘಾತಕ್ಕೀಡಾಯಿತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಫ್ಘಾನ್: 31 ಉಗ್ರರ ಬಲಿ
ಜಿ-20 ಶೃಂಗಸಭೆ ಇಂದು
ಡರ್ಬಾನ್: ಪೋಸ್ಟರ್‌‌ನಲ್ಲಿ ಗಾಂಧಿ-ಭಾರತೀಯರ ವಿರೋಧ
ಸೇನೆ ಜತೆ ಸಂಘರ್ಷ-ಪ್ರಭಾಕರನ್‌ ಪುತ್ರ ಚಾರ್ಲ್ಸ್‌ಗೆ ಗಾಯ
ಅಮೆರಿಕದ ಡ್ರೋನ್ ದಾಳಿಗೆ ಕನಿಷ್ಠ 10 ಬಲಿ
ಬ್ರಿಟನ್‌: ವಿದೇಶಿ ವಿದ್ಯಾರ್ಥಿಗಳಿಗೆ ಕಠಿಣ ಕಾಯ್ದೆ