ವಿಶ್ವದ ಅತ್ಯಂತ ಪ್ರಭಾವಶಾಲಿ ನಾಯಕರು ಲಂಡನ್ ಶೃಂಗಸಭೆ ಆರಂಭಿಸುತ್ತಿದ್ದಂತೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಗುರುವಾರ ಭೇಟಿಯಾಗಲಿದ್ದಾರೆ.
ಭಾರತವು ಸುರಕ್ಷಿತ ಅಣ್ವಸ್ತ್ರ ಪ್ರಪಂಚ ಮತ್ತು ಸ್ಥಿರ ವಿಶ್ವ ಆರ್ಥಿಕತೆಯಾಗಿ ಶೃಂಗಸಭೆಯಲ್ಲಿ ದನಿ ಎತ್ತುವುದೆಂದು ನಿರೀಕ್ಷಿಸಲಾಗಿದೆ. ಆದರೆ ಒಬಾಮಾ ಜತೆ ಪ್ರಧಾನಮಂತ್ರಿಗಳ ಭೇಟಿಯು ಭಾರತಕ್ಕೆ ಅತೀ ನಿರ್ಣಾಯಕವೆನಿಸಿದೆ. ಸಿಂಗ್ ಅವರು ಜಿ-20 ಶೃಂಗಸಭೆಗೆ ಮುನ್ನಾ, ಬ್ರಿಟನ್ ಪ್ರಧಾನಮಂತ್ರಿ ಗೋರ್ಡನ್ ಬ್ರೌನ್ ಅವರನ್ನು ತಮ್ಮ ನಿವಾಸದಲ್ಲಿ ಭೇಟಿ ಮಾಡಿದರು.
ಆದರೆ ಪ್ರಧಾನಮಂತ್ರಿ ಅವರ ನಿರ್ಣಾಯಕ ದ್ವಿಪಕ್ಷೀಯ ಭೇಟಿಯು ಅಧ್ಯಕ್ಷ ಒಬಾಮಾ ಜತೆಯೆಂದು ಹೇಳಲಾಗಿದೆ. ಒಬಾಮಾಆಡಳಿತವು ಆಫ್ಘಾನಿಸ್ತಾನ-ಪಾಕಿಸ್ತಾನ ಕಾರ್ಯತಂತ್ರವನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಅವರ ಭೇಟಿಯು ಮಹತ್ವ ಗಳಿಸಿದೆ.
ಪಾಕಿಸ್ತಾನದಿಂದ ಭಯೋತ್ಪಾದನೆ ಹುಟ್ಟಿಕೊಂಡಿದೆ ಎಂಬ ಭಾರತದ ಕಳವಳದ ಜತೆ ಪಾಕಿಸ್ತಾನಕ್ಕೆ ನೂತನ ಕಾರ್ಯತಂತ್ರದಲ್ಲಿ ಮೂರು ಪಟ್ಟು ಹಣಕಾಸು ನೆರವು ಹೆಚ್ಚಿಸಿರುವುದು ಎಲ್ಲಿ ಮತ್ತು ಹೇಗೆ ಕಾಣಿಸಿಕೊಳ್ಳುತ್ತದೆ ಎನ್ನುವ ಬಗ್ಗೆ ಭಾರತಕ್ಕೆ ಆತಂಕವಿದೆ. ಆಫ್ಘಾನಿಸ್ತಾನದಲ್ಲಿ ಸ್ಥಿರತೆ ಖಾತರಿಗೆ ಭಾರತ ನಿರ್ಣಾಯಕ ಪಾತ್ರ ವಹಿಸಬೇಕೆಂದು ಅಮೆರಿಕ ತಿಳಿಸಿದ್ದು, ಆಫ್ಘಾನಿಸ್ತಾನದ ಕಡೆ ಗಮನ ಹರಿಸಲು ಭಾರತ-ಪಾಕ್ ಉದ್ವಿಗ್ನತೆ ಶಮನಗೊಳ್ಳಬೇಕೆಂಬ ಬಗ್ಗೆ ಕೂಡ ಇಂಗಿತ ವ್ಯಕ್ತಪಡಿಸಿದೆ. |