ಸುಮಾರು 3 ದಶಕಗಳ ಹಿಂದೆ ಕೆನಡಾಕ್ಕೆ ವಲಸೆ ಹೋದ ಭಾರತೀಯ ಸಂಜಾತ ಕೆನಡ ಪ್ರಜೆಯನ್ನು ವಾಂಕೋವರ್‌ನ ಪೌರತ್ವ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದೆ.
47 ವರ್ಷ ವಯಸ್ಸಿನ ಶಿಂಧೇರ್ ಸಿಂಗ್ ಪುರೇವಾಲ್ ಪಂಜಾಬ್ ಕುಟುಂಬದವನಾಗಿದ್ದು, ಅವರಿಗೆ ಕೆನಡಾದ ಅಧಿಕೃತ ಭಾಷೆಗಳಾದ ಇಂಗ್ಲೀಷ್ ಮತ್ತು ಫ್ರೆಂಚ್ ಎರಡರಲ್ಲೂ ಪ್ರಮಾಣವಚನವನ್ನು ಬುಧವಾರ ಬೋಧಿಸಲಾಯಿತು.
ಪುರೆವಾಲ್ 1979ರಲ್ಲಿ ಕೆನಡಾಗೆ ಆಗಮಿಸಿದಾಗ ಇಂಗ್ಲೀಷ್ ಬಗ್ಗೆ ಅಲ್ಪ ಜ್ಞಾನ ಹೊಂದಿದ್ದರು. ಆದರೆ ಕ್ರಮೇಣ ಇಂಗ್ಲೀಷ್ ಭಾಷೆಯಲ್ಲಿ ಪ್ರೌಢಿಮೆ ಸಾಧಿಸಿದರು ಮತ್ತು ಫ್ರೆಂಚ್ ಭಾಷೆಯನ್ನು ಕೂಡ ಕಲಿತರು. ಕಿಂಗ್‌ಸ್ಟನ್ ಕ್ವೀನ್ಸ್ ವಿವಿಯಲ್ಲಿ ರಾಜಕೀಯ ಇತಿಹಾಸ ಅಧ್ಯಯನ ಮಾಡಿದ ಅವರು, ಬಹುಸಂಸ್ಕೃತಿ ರಾಜಕೀಯ ಕುರಿತು ಸ್ನಾತಕೋತ್ತರ ಥೀಸಿಸ್ ಸಲುವಾಗಿ ಅವರು ಪ್ರಧಾನಮಂತ್ರಿ ಪೀರೆ ಟ್ರುಡೆಯ ಸಂದರ್ಶನ ಪಡೆದಿದ್ದರು. ತಂದೆ ನಿಧನರಾದಾಗ ಪುರೆವಾಲ್ ಒಂದು ವರ್ಷ ಪ್ರಾಯದ ಮಗುವಾಗಿದ್ದರು. ಅವರ ತಾಯಿ ಕೆನಡಾಗೆ ತನ್ನ ಇತರೆ ಮೂರು ಮಕ್ಕಳೊಂದಿಗೆ ಕರೆತಂದಿದ್ದರು. |