ನ್ಯೂಯಾರ್ಕ್‌ನಲ್ಲಿರುವ ಅಮೆರಿಕದ ವಲಸೆಗಾರರ ಕೋಣೆಗೆ ನುಗ್ಗಿ ಏಕಾಏಕಿ ಗುಂಡು ಹಾರಿಸಿ 13 ಜನರನ್ನು ಹತ್ಯೆಗೈದಿರುವ ಕೃತ್ಯದ ರೂವಾರಿಗಳು ತಾವೇ ಎಂದು ಪಾಕಿಸ್ತಾನದೇ ತಾಲಿಬಾನ್ ಮುಖಂಡ ಬೈತುಲ್ಲಾ ಮೆಹ್ಸೂದ್ ಹೊಣೆ ಹೊತ್ತುಕೊಂಡು ಶನಿವಾರ ಹೇಳಿಕೆ ನೀಡಿದ್ದಾನೆ.
ಈ ದುಷ್ಕೃತ್ಯದ ಹೊಣೆಯನ್ನು ನಾವೇ ಹೊತ್ತುಕೊಂಡಿರುವುದಾಗಿ ಮೆಹ್ಸೂದ್ ಹೇಳಿದ್ದಾನೆ, ವಲಸೆಗಾರರ ಕೋಣೆಗೆ ನುಗ್ಗಿರುವ ಬಂದೂಕುಧಾರಿ ವ್ಯಕ್ತಿ ನಮ್ಮವನೇ ಆಗಿದ್ದಾನೆ ಎಂದು ಹೇಳುವ ಮೂಲಕ ನ್ಯೂಯಾರ್ಕ್‌ಗೆ ಸಡ್ಡು ಹೊಡೆದಿರುವುದನ್ನು ಸಾಬೀತು ಪಡಿಸಿದ್ದಾನೆ. ಅಲ್ಲಿ ಇಂತಹ ವ್ಯವಸ್ಥಿತ ದಾಳಿ ನಡೆಸುವ ಬಗ್ಗೆ ನಿರ್ದೇಶನ ನೀಡಿರುವುದೇ ತಾಲಿಬಾನ್ ಎಂದು ಹೆಮ್ಮೆಯಿಂದ ರಹಸ್ಯ ತಾಣವೊಂದರಿಂದ ದೂರವಾಣಿ ಮೂಲಕ ಹೇಳಿಕೆ ನೀಡಿದ್ದಾನೆ.
ನ್ಯೂಯಾರ್ಕ್‌ನ ಸಮುದಾಯ ಕೇಂದ್ರದ ಹಿಂದಿನ ಬಾಗಿಲಿಗೆ ತನ್ನ ಕಾರನ್ನು ಅಡ್ಡವಾಗಿ ನಿಲ್ಲಿಸಿದ ಬಂದೂಕುಧಾರಿಯೊಬ್ಬ, ಪೌರತ್ವ ತರಗತಿಗೆ ಹಾಜರಾಗಿದ್ದ ವಲಸೆಗಾರರಿಂದ ತುಂಬಿದ್ದ ಕೋಣೆಯಲ್ಲಿ ಒಂದೇ ಸಮನೆ ಗುಂಡು ಹಾರಿಸಿ 13 ಜನರನ್ನು ಹತ್ಯೆ ಮಾಡಿದ ಬಳಿಕ ಸ್ವತಃ ಗುಂಡು ಹೊಡೆದುಕೊಂಡು ಸಾವನ್ನಪ್ಪಿರುವ ಭೀಕರ ಘಟನೆ ಶುಕ್ರವಾರ ನಡೆದಿತ್ತು.
ವಲಸೆಗಾರರರು ಇಲ್ಲೇ ನೆಲೆಸಲು ಅನುಕೂಲ ಮಾಡುವ ಸಂಸ್ಥೆಯಾದ ಅಮೆರಿಕನ್ ಸಿವಿಕ್ ಅಸೋಸಿಯೇಷನ್‌ನಲ್ಲಿ ಬೆಳಿಗ್ಗೆ 10 ಗಂಟೆ ಕಳೆದ ಸ್ವಲ್ಪ ಹೊತ್ತಿನಲ್ಲೇ ಈ ದಾಳಿ ನಡೆದಿದೆ. ಯಾರೂ ತಪ್ಪಿಸಿಕೊಳ್ಳದಂತೆ ಹಿಂಬಾಗಿಲಿಗೆ ಕಾರನ್ನು ಅಡ್ಡವಾಗಿ ನಿಲ್ಲಿಸಿದ ಬಂದೂಕುಧಾರಿ ಮುಂಭಾಗಿಲಿನಿಂದ ಪ್ರವೇಶಿಸಿ ಇಬ್ಬರು ಸ್ವಾಗತಕಾರಿಣಿಗಳ ಮೇಲೆ ಗುಂಡು ಹಾರಿಸಿದ್ದ
ಇದೊಂದು ವಿಯೆಟ್ನಾಂ ವಲಸೆಗಾರನೆಂದು ನಂಬಲಾದ ಹಂತಕ ಬಳಿಕ ಕೋಣೆಯೊಳಗೆ ಪ್ರವೇಶಿಸಿ ಪೌರತ್ವ ತರಗತಿಗೆ ಹಾಜರಾಗಿದ್ದ ಜನರ ಮೇಲೆ ಗುಂಡಿನ ಮಳೆಗರೆದಿದ್ದ ಎಂದೇ ನಂಬಲಾಗಿತ್ತು. ಈ ದುಷ್ಕೃತ್ಯ ತಾಲಿಬಾನ್ ದಾಳಿಯ ಯೋಜನೆ ಎಂದು ಹೊಣೆ ಹೊತ್ತು ಕೊಂಡಿರುವುದು ತೀವ್ರ ಆಘಾತಕಾರಿ ಬೆಳವಣಿಗೆಯಾಗಿ ಪರಿಣಮಿಸಿದೆ. |