ಶ್ರೀಲಂಕಾದ ಸೇನಾಪಡೆಯು ಉಳಿದ ಬಂಡುಕೋರರ ನೆಲೆಗಳ ಸ್ವಾಧೀನಕ್ಕೆ ಒಳಪ್ರದೇಶದೊಳಕ್ಕೆ ದೂರದವರೆಗೆ ನುಗ್ಗಿದ್ದು, ವ್ಯಾಘ್ರ ಪಡೆಯ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್‌ಗೆ ಸೇರಿದ ಹಾನಿಗೊಂಡ ಗುಂಡುನಿರೋಧಕ ಲಿಮೋಸಿನ್‌ನೊಂದನ್ನು ಪತ್ತೆಹಚ್ಚಿದೆ.
ಈಶಾನ್ಯ ಪುದುಕುಡಿಯರುಪ್ಪು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿರುವ 58ನೇ ವಿಭಾಗೀಯ ಪಡೆಗಳು, ಭದ್ರತಾ ಪಡೆಗಳು ಬುಧವಾರ ಸುತ್ತುವರೆದ ಒಂದು ಚದರಡಿ ವಿಸ್ತೀರ್ಣದಲ್ಲಿರುವ ಐಷಾರಾಮಿ ಹವಾನಿಯಂತ್ರಿತ ಬಂಗಲೆಯ ಸಮೀಪದಲ್ಲಿ ಲಿಮೋಸಿನ್ ಕಾರು ಪತ್ತೆಯಾಗಿದೆಯೆಂದು ಸೇನೆ ಹೇಳಿದೆ.
ಐಷಾರಾಮಿ ಬಂಗಲೆಯ ಸಮೀಪದಲ್ಲಿ ಸುಟ್ಟುಹೋದ ನಾಲ್ಕು ಕಾರುಗಳ ಜತೆ ಗುಂಡು ನಿರೋಧಕ ಕಾರು ಪತ್ತೆಯಾಗಿದೆ. ಈಶಾನ್ಯ ಪುದುಕುಡಿಯರುಪ್ಪು ಪ್ರದೇಶದಲ್ಲಿ ಕೈಗೊಂಡ ಕಾರ್ಯಾಚರಣೆಯಲ್ಲಿ ಭದ್ರತಾಪಡೆಗಳು ಕಳೆದ ರಾತ್ರಿ ಈ ವಾಹನಗಳನ್ನು ಪತ್ತೆಹಚ್ಚಿದೆ.
ಎಲ್‌ಟಿಟಿಇ ಕಾರ್ಯಕರ್ತರನ್ನು ಕಳೆದುಕೊಂಡು, ಕೊನೆಯ ನಿಮಿಷದ ವಿಮೋಚನೆಯ ಎಲ್ಲ ಆಸೆಗಳು ಬತ್ತಿಹೋಗಿದ್ದರಿಂದ ಎಲ್‌ಟಿಟಿಇ ಉನ್ನತ ಮಟ್ಟದ ಮುಖಂಡರು ಬಳಸುತ್ತಿದ್ದರೆಂದು ಭಾವಿಸಲಾದ ಲಿಮೋಸಿನ್ ಸೇರಿ ಎಲ್ಲ ಐದು ಕಾರುಗಳಿಗೆ ಅವರು ಬೆಂಕಿ ಹಚ್ಚಿದ್ದಾರೆಂದು ಸೇನೆ ಹೇಳಿಕೆ ನೀಡಿದೆ. |