ಅಮೆರಿಕದ ಡ್ರೋನ್ ವಿಮಾನಗಳ ದಾಳಿಗೆ ಪ್ರತೀಕಾರ ಮುಂದುವರಿಸಿರುವ ತಾಲಿಬಾನ್ ಶನಿವಾರ ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಅರೆಮಿಲಿಟರಿ ಪಡೆಗಳ ಮೇಲೆ ವಿಫಲ ಆತ್ಮಾಹುತಿ ದಾಳಿ ನಡೆಸುವ ಯತ್ನದಲ್ಲಿ ಐವರು ಶಾಲಾಮಕ್ಕಳು ಸೇರಿದಂತೆ ಕನಿಷ್ಠ 17 ನಾಗರಿಕರು ಹತರಾಗಿದ್ದಾರೆ.
ಉತ್ತರ ವಾಜಿರಿಸ್ತಾನ ಜಿಲ್ಲೆಯ ಜನನಿಬಿಡ ಮಿರಾನ್‌ಶಾ ಮಾರುಕಟ್ಟೆಯಲ್ಲಿ ತಮ್ಮ ವಾಹನಗಳ ಸಾಲನ್ನು ಬೆನ್ನಟ್ಟುತ್ತಿದ್ದ ಸ್ಫೋಟಕ ತುಂಬಿದ ವಾಹನದತ್ತ ಸೈನಿಕರು ಗುಂಡುಹಾರಿಸಿದರು. ಈ ಗುಂಡಿನ ದಾಳಿಯಿಂದ ವಾಹನವು ಸ್ಫೋಟಿಸಿ 17 ದಾರಿಹೋಕರು ಅಸುನೀಗಿದ್ದು, ಅವರಲ್ಲಿ ಐವರು ಶಾಲಾಮಕ್ಕಳೂ ಸೇರಿದ್ದಾರೆ.
ಭದ್ರತಾ ಸಿಬ್ಬಂದಿಯಲ್ಲಿ ಸಾವುನೋವು ಉಂಟಾಗಿರುವ ಬಗ್ಗೆ ವರದಿಯಾಗಿಲ್ಲ. ಅಮೆರಿಕದ ಡ್ರೋನ್ ವಿಮಾನದ ದಾಳಿಯಿಂದ ತಾಲಿಬಾನ್ ಮತ್ತು ಅಲ್ ಖಾಯಿದಾ ಉಗ್ರರು ಸೇರಿದಂತೆ 13 ಜನರು ಮಿರಾನ್‌ಶಾಗೆ 35 ಕಿಮೀ ದೂರದ ದತ್ತಾ ಖೇಲ್ ಪ್ರದೇಶದಲ್ಲಿ ಅಸುನೀಗಿದ ಕೆಲವೇ ಗಂಟೆಗಳಲ್ಲಿ ಈ ಸ್ಫೋಟದ ಘಟನೆ ಸಂಭವಿಸಿದೆ. |