ಎಲ್ಟಿಟಿಇ ಧ್ವಂಸಕ್ಕೆ ಸಮೀಪಿಸುತ್ತಿರುವ ಶ್ರೀಲಂಕಾ ಪಡೆಗಳು ಎಲ್‌ಟಿಟಿಇಯ ಕಟ್ಟೆಕಡೆಯ ಪ್ರಾಬಲ್ಯದ ಪುದುಕುಡಿಯಾರಪ್ಪು ಪ್ರದೇಶವನ್ನು ಕೈವಶ ಮಾಡಿಕೊಂಡಿದೆ. ಬಂಡುಕೋರರರನ್ನು ನಾಗರಿಕರಿಂದ ತುಂಬಿರುವ ಗುಂಡು ಹಾರಿಸದ ವಲಯಕ್ಕೆ ಶ್ರೀಲಂಕಾ ಪಡೆಗಳು ದಬ್ಬಿದ್ದು, ಉತ್ತರದಲ್ಲಿ ಭಾರೀ ಕಾಳಗದಲ್ಲಿ 420 ತಮಿಳು ವ್ಯಾಘ್ರಗಳು ಹತರಾಗಿದ್ದಾರೆ.
20 ಚದಕಿಮೀ ಸುರಕ್ಷತೆ ವಲಯದಲ್ಲಿ ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಮತ್ತು ಎರಡನೇ ದಂಡಾಧಿಪತಿ ಪೊಟ್ಟು ಅಮ್ಮನ್ ಅಡಗಿದ್ದಾರೆಂದು ನಿರೀಕ್ಷಿಸಲಾಗಿದ್ದು, ಹತ್ತಾರು ಸಾವಿರ ನಾಗರಿಕರನ್ನು ಮಾನವ ಕವಚದಂತೆ ಬಂಡುಕೋರರು ಬಳಸುತ್ತಿದ್ದಾರೆಂದು ಸೇನೆ ಆರೋಪಿಸಿದೆ.
ಸೇನೆಯು ತಮಿಳು ಬಂಡುಕೋರರ ನಿಯಂತ್ರಣದಲ್ಲಿದ್ದ ಇಡೀ ಪುದುಕುಡಿಯರುಪ್ಪು ಪ್ರದೇಶವನ್ನು ಕೈವಶಮಾಡಿಕೊಂಡಿದ್ದು, ಇತ್ತೀಚಿನ ಹೋರಾಟದಲ್ಲಿ ಎಲ್‌ಟಿಟಿಇ ತನ್ನ ಪ್ರಮುಖ ನಾಯಕರನ್ನು ಕಳೆದುಕೊಂಡಿದೆ ಎಂದು ಮಿಲಿಟರಿ ವಕ್ತಾರ ಉದಯ ನಾನಯಕ್ಕರಾ ತಿಳಿಸಿದ್ದಾರೆ. ಯುದ್ಧವಲಯದಲ್ಲಿ ಕಳೆದ ಮೂರು ದಿನಗಳಿಂದ ಮುನ್ನುಗ್ಗುವ ಪಡೆಗಳ ಜತೆ ತೀಕ್ಷ್ಣ ಸಂಘರ್ಷಗಳಲ್ಲಿ 420 ಬಂಡುಕೋರರ ದೇಹಗಳು ಪತ್ತೆಯಾಗಿವೆ.
ಸೇನೆಯು ಪುದುಕುಡಿಯರಿಪ್ಪುನಲ್ಲಿ ಒಂದು ಚದರ ಕಿಮೀ ಎಲ್‌ಟಿಟಿಇ ಪ್ರದೇಶವನ್ನು ಕೈವಶ ಮಾಡಿಕೊಂಡ ಬಳಿಕ ಪ್ರಭಾಕರನ್ 20 ಚದರಕಿಮೀ ಗುಂಡುಹಾರಿಸದ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದು, ಅವನನ್ನು ಜೀವಂತವಾಗಿ ಸೆರೆಹಿಡಿಯಲಾಗುವುದು ಅಥವಾ ಕೊಲ್ಲಲಾಗುವುದು. ಪ್ರಭಾಕರನ್ ಭಾರೀ ಗಾತ್ರದ ವ್ಯಕ್ತಿಯಾಗಿದ್ದು, ಜನರ ನಡುವೆ ಅವನನ್ನು ಗುರುತಿಸುವುದು ಸುಲಭ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದರು. |