ಪಾಕಿಸ್ತಾನದಲ್ಲಿ ಬಂಡುಕೋರ ಚಟುವಟಿಕೆ ಗರಿಗೆದರಿದ್ದು, ಮುಂದಿನ ಆರು ತಿಂಗಳಲ್ಲಿ ಪಾಕಿಸ್ತಾನ ಪತನ ಹೊಂದಬಹುದು ಎಂದು ಗೆರಿಲ್ಲಾ ಯುದ್ಧದಲ್ಲಿ ಉನ್ನತ ಪರಿಣತಿ ಹೊಂದಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಇಂತಹ ಒಂದು ಎಚ್ಚರಿಕೆಯ ಭವಿಷ್ಯವನ್ನು ಜ.ಪೆಟ್ರಾಸ್‌ಗೆ ಅಮೆರಿಕದ ಮಿಲಿಟರಿಯ ಮಾಜಿ ಸಲಹೆಗಾರ ಡೇವಿಡ್ ಕಿಲ್ಕುಲೆನ್ ನೀಡಿದ್ದಾರೆ.
ಸಂಸತ್ತಿನ ಸಮಿತಿಗೆ ನೀಡಿದ ಸಾಕ್ಷ್ಯದಲ್ಲಿ ಪೆಟ್ರಾಸ್ ಕೂಡ ಇದೇ ರೀತಿಯಲ್ಲಿ ಪ್ರತಿಧ್ವನಿಸಿದ್ದು, ಅಣ್ವಸ್ತ್ರಗಳು ಮತ್ತು ಅಲ್ ಖಾಯಿದಾ ತವರುಮನೆಯಾಗಿರುವ ಪಾಕಿಸ್ತಾನವನ್ನು ಭಯೋತ್ಪಾದಕ ಚಟುವಟಿಕೆಗಳು ನುಂಗಿಹಾಕುತ್ತವೆಂದು ಹೇಳಿದ್ದರು. ಭಯೋತ್ಪಾದನೆ ದಾಳಿಗಳು ಮೇಲುಗೈ ಪಡೆದಿದ್ದಕ್ಕೆ ಪಾಕಿಸ್ತಾನ ಸಾಕ್ಷಿಯಾಗಿದ್ದು, ರಾಷ್ಟ್ರಕ್ಕೆ ಪಾಕಿಸ್ತಾನ ಮತ್ತು ವಾಷಿಂಗ್ಟನ್ ವಿಶ್ಲೇಷಕರು ಭವಿಷ್ಯದ ವೇಳಾಪಟ್ಟಿ ಮುಂದಿಡುತ್ತಾರೆ.
ಪಾಕಿಸ್ತಾನವು ಭಾರತವನ್ನು ಶತ್ರು ನಂ.1 ಎಂದು ಭಾವಿಸಿರುವಾಗ ಅಧ್ಯಕ್ಷ ಒಬಾಮಾ ಅವರು, ಪಾಕಿಸ್ತಾನದ ಸಹಭಾಗಿತ್ವದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟದ ಪ್ರಸ್ತಾಪ ಮಾಡಿರುವ ಕಾರ್ಯತಂತ್ರದ ಯಶಸ್ಸಿನ ಬಗ್ಗೆ ಅನುಮಾನವನ್ನು ನ್ಯೂಯಾರ್ಕ್ ಟೈಮ್ಸ್ ವ್ಯಕ್ತಪಡಿಸಿದೆ. ಅಮೆರಿಕದ ಬೃಹತ್ ಮೊತ್ತದ ಹಣಕಾಸು ನೆರವಿನೊಂದಿಗೆ ಒಬಾಮಾ ಕಾರ್ಯತಂತ್ರವನ್ನು ಪಾಕ್ ಸರ್ಕಾರ ಸ್ವಾಗತಿಸಿ, ಸಕಾರಾತ್ಮಕ ಬದಲಾವಣೆಯೆಂದು ಹೇಳಿರುವುದಾಗಿ ಪತ್ರಿಕೆ ತಿಳಿಸಿದೆ
ಆದರೆ ಪಾಕಿಸ್ತಾನಿಗಳನ್ನು ತನ್ನ ಕಡೆ ಸೆಳೆಯಲು ಒಬಾಮಾ ಆಡಳಿತ ಪ್ರಯತ್ನಿಸುತ್ತಿದ್ದಂತೆ, ಸಾರ್ವಜನಿಕರು, ರಾಜಕೀಯ ವರ್ಗ ಮತ್ತು ಮಿಲಿಟರಿಯ ದೊಡ್ಡ ಭಾಗ ಯೋಜನೆಯನ್ನು ತಳ್ಳಿಹಾಕಿದ್ದು, ಅಲ್ ಖಾಯಿದಾ ಮತ್ತು ತಾಲಿಬಾನ್ ಬೆದರಿಕೆ ಅತ್ಯಂತ ತುರ್ತಿನದ್ದಾಗಿದೆಯೆಂದು ಹೇಳಿವೆ. |