ಮಧ್ಯ ಇಟಲಿಯಲ್ಲಿ ಸೋಮವಾರ ಮುಂಜಾನೆ ಜನರು ನಿದ್ರಾವಶರಾಗಿದ್ದಾಗಲೇ ಭೀಕರ ಭೂಕಂಪ ಅಪ್ಪಳಿಸಿದ್ದು, ಕನಿಷ್ಠ 17 ಜನರು ಸತ್ತಿದ್ದಾರೆ ಮತ್ತು 30 ಮಂದಿ ನಾಪತ್ತೆಯಾಗಿದ್ದಾರೆಂದು ಇಟಲಿ ಮಾಧ್ಯಮ ವರದಿ ಮಾಡಿದೆ.ಅಬ್ರುಜೊ ಪ್ರದೇಶದಲ್ಲಿ ಅನೇಕ ಮನೆಗಳು ಕುಸಿದುಬಿದ್ದಿರುವುದರಿಂದ ಸತ್ತವರ ಸಂಖ್ಯೆ ಮತ್ತಷ್ಟು ಹೆಚ್ಚುವುದೆಂದು ನಿರೀಕ್ಷಿಸಲಾಗಿದೆ.
5.8 ತೀವ್ರತೆಯ ಭೂಕಂಪದ ಕೇಂದ್ರಬಿಂದು ಅಬ್ರುಜೊ ರಾಜಧಾನಿ ಎಲ್ ಅಕ್ವಿಲಾವಾಗಿದ್ದು, ಎಲ್ಲೆಲ್ಲೂ ವಿನಾಶದ ದೃಶ್ಯ ಕಂಡುಬಂದಿದ್ದು, ಸೈರನ್‌ಗಳು ಮೊಳಗಿದವು ಮತ್ತು ರಕ್ಷಣಾ ತಂಡವು ಅವಶೇಷಗಳಲ್ಲಿ ಸಿಕ್ಕಿಬಿದ್ದ ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿತು ಎಂದು ಆನ್ಸಾ ಸುದ್ದಿಸಂಸ್ಥೆ ಹೇಳಿದೆ. ಮುಂಜಾನೆ 3.30ಕ್ಕೆ ಭೂಕಂಪ ಅಪ್ಪಳಿಸಿದಾಗ ಸಾವಿರಾರು ಜನರಿಗೆ ನಿದ್ರೆಯಿಂದ ಎಚ್ಚೆತ್ತು ರಸ್ತೆಗಳಿಗೆ ಓಡಿದರೆಂದು ವರದಿ ತಿಳಿಸಿದೆ.
ಕ್ಯಾಸ್ಟೆಲುನುವೊದ ಸಣ್ಣ ಪಟ್ಟಣಗಳಾದ ಪೋಗಿಯೊ ಪಿಕೆಂಜೆಯಲ್ಲಿ ಒಬ್ಬರು, ಟಾರ್ಮಿನ್‌ಟಾರ್ಟೆಯಲ್ಲಿ ಒಬ್ಬರು ಮತ್ತು ಮೂರು ವರ್ಷ ವಯಸ್ಸಿನ ಬಾಲಕಿ ಸೇರಿ ಫೋಸಾದಲ್ಲಿ ಇಬ್ಬರು ಮೃತಪಟ್ಟಿದ್ದಾರೆಂದು ಪೊಲೀಸರು ಆನ್ಸಾ ಸುದ್ದಿಸಂಸ್ಥೆಗೆ ದೃಢಪಡಿಸಿದ್ದಾರೆ. ಎಲ್ ಅಕ್ವಿಲಾದಲ್ಲಿ ಇನ್ನೂ ನಾಲ್ಕು ಮಂದಿ ಮಕ್ಕಳು ಆಸ್ಪತ್ರೆಯೊಂದರಲ್ಲಿ ಸತ್ತಿದ್ದಾರೆಂದು ಆನ್ಸಾ ಹೇಳಿದೆ. ಸಮೀಪದ ಸಾನ್ ಡಿಮಿಟ್ರಿಯೊ ಡೇ ವೆಸ್ಟನಿಯಲ್ಲಿ 8 ಮಂದಿ ನಾಪತ್ತೆಯಾಗಿದ್ದಾರೆಂದು ಸಾರ್ವಜನಿಕ ಸುರಕ್ಷತೆ ಅಧಿಕಾರಿಗಳು ಹೇಳಿದ್ದಾರೆ. |